ರಾಜಸ್ಥಾನ: ‘ಮಾತಾ–ಪಿತ ಪೂಜಾ ದಿವಸ್‌’ ಆಚರಣೆ ರದ್ದು

7

ರಾಜಸ್ಥಾನ: ‘ಮಾತಾ–ಪಿತ ಪೂಜಾ ದಿವಸ್‌’ ಆಚರಣೆ ರದ್ದು

Published:
Updated:

ಜೈಪುರ: ‘ಪ್ರೇಮಿಗಳ ದಿನಾಚರಣೆ’ ಬದಲು ಶಾಲೆಗಳಲ್ಲಿ ‘ಮಾತಾ–ಪಿತ ಪೂಜಾ ದಿವಸ್‌’ ಎಂಬುದಾಗಿ ಆಚರಿಸುವಂತೆ ಸೂಚಿಸಿ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜಸ್ಥಾನದ ನೂತನ ಕಾಂಗ್ರೆಸ್ ಹಿಂತೆಗೆದುಕೊಂಡಿದೆ.

‘ಇಂತಹ ಆದೇಶ ಹೊರಡಿಸಿ ಬಿಜೆಪಿ ಸರ್ಕಾರ ಸೋಗಲಾಡಿತನ ಪ್ರದರ್ಶಿಸಿದೆಯಷ್ಟೆ. ನಮಗೆ ಪ್ರತಿ ದಿನವೂ ತಾಯಿ–ತಂದೆಯನ್ನು ಪೂಜಿಸುವ ದಿನವೇ ಆಗಿದೆ. ಅವರಿಗೆ ಒಂದು ದಿನದ ಮಟ್ಟಿಗೆ ಮಾತ್ರ ಮಹತ್ವ ನೀಡುವುದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು’ ಎಂದು ಶಿಕ್ಷಣ ಸಚಿವ ಗೋವಿಂದ್‌ ಸಿಂಗ್ ಡೋಟಾಸರಾ ಟ್ವೀಟ್‌ ಮಾಡಿದ್ದಾರೆ.

‘ಪಾಲಕರು ಮತ್ತು ಶಿಕ್ಷಕರಿಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಉನ್ನತ ಸ್ಥಾನ ಇದೆ. ಅವರನ್ನು ನಿತ್ಯವೂ ಪೂಜಿಸಬೇಕು. ಆದರೆ, ಶಾಲೆಯಲ್ಲಿ ಫೆ. 14ರಂದು ಮಾತ್ರ ತಾಯಿ–ತಂದೆಯನ್ನು ಪೂಜಿಸುವಂತೆ ಆದೇಶ ನೀಡಿದ್ದು ಬರೀ ನಾಟಕ’ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ.ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕಾಂಗ್ರೆಸ್‌ ಸರ್ಕಾರ ಹಿಂತೆಗೆದುಕೊಂಡಿರುವುದು ಇದೇ ಮೊದಲಲ್ಲ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !