ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಹುಬಲಿ’ ಕಥೆಗಾರನ ಹೊಸ ಪುಸ್ತಕ ’ವಾನರ’

Last Updated 8 ನವೆಂಬರ್ 2018, 20:09 IST
ಅಕ್ಷರ ಗಾತ್ರ

ನವದೆಹಲಿ: ‘ಬಾಹುಬಲಿ’ ಸರಣಿ ಕಥೆಗಳನ್ನು ಬರೆದು ಗಮನ ಸೆಳೆದಿದ್ದ ಲೇಖಕ ಆನಂದ ನೀಲಕಂಠನ್‌, ಈಗ ರಾಮಾಯಣದ ಮತ್ತೊಂದು ಆಸಕ್ತಿಕರ ಅಧ್ಯಾಯ ‘ವಾನರ’ವನ್ನು ಪುಸ್ತಕ ರೂಪಕ್ಕೆ ಇಳಿಸಿದ್ದಾರೆ.

‘ವಾನರ: ದಿ ಲೆಜೆಂಡ್‌ ಆಫ್‌ ಬಾಲಿ, ಸುಗ್ರೀವ ಅಂಡ್‌ ತಾರಾ’ ಕೃತಿಯನ್ನು ಪೆಂಗ್ವಿನ್‌ ಪ್ರಕಾಶನ ಪ್ರಕಟಿಸಿದೆ.

‘ಬಾಹುಬಲಿ’ ನಂತರ, ನೀಲಕಂಠನ್‌ ಬರೆದಿರುವ ‘ಅಸುರ: ದಿ ಟೇಲ್‌ ಆಫ್‌ ದಿ ವ್ಯಾಂಕ್ವಿಷ್ಡ್‌’ ಕೃತಿಯನ್ನು ಎಸ್.ಎಸ್. ರಾಜಮೌಳಿ ತೆರೆಗೆ ತರುತ್ತಿದ್ದಾರೆ. ರಾಮಾಯಣವನ್ನು ರಾವಣನ ಸ್ಥಾನದಲ್ಲಿ ನಿಂತು ನೋಡುವ ಕೃತಿ ಇದಾಗಿದೆ.

‘ರಾವಣನ ಪಾತ್ರವನ್ನು ‘ಅಸುರ’ನಾಗಿ, ಬಾಲಿಯನ್ನು ‘ವಾನರ’ನನ್ನಾಗಿ ಚಿತ್ರಿಸಿ ಕೃತಿ ರಚಿಸಿದ್ದೇನೆ. ‘ವಾನರ’ ಎಂಬುದು ರಾಮಾಯಣದಲ್ಲಿನ ಮಹತ್ವದ ಅಧ್ಯಯನವಾಗಿದೆ’ ಎಂದು ನೀಲಕಂಠನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT