ರಾಜಕೀಯ ಪ್ರವೇಶಿಸಿದ ನಟಿ ವಾಣಿ ವಿಶ್ವನಾಥ್

7

ರಾಜಕೀಯ ಪ್ರವೇಶಿಸಿದ ನಟಿ ವಾಣಿ ವಿಶ್ವನಾಥ್

Published:
Updated:

ಹೈದರಾಬಾದ್: ಬಹುಭಾಷಾ ನಟಿ ವಾಣಿ ವಿಶ್ವನಾಥ್ ರಾಜಕೀಯ ಪ್ರವೇಶಿಸಿದ್ದಾರೆ. ವಾಣಿ ಅವರು ತೆಲುಗು ದೇಶಂ ಪಾರ್ಟಿ (ಟಿಡಿಪಿ)ಗೆ ಸೇರಲಿದ್ದು, ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಜತೆ ಮಾತುಕತೆ ನಡೆಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಗರಿ ಕ್ಷೇತ್ರದಿಂದ ವಾಣಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಟಿಡಿಪಿ ಪರ ಪ್ರಚಾರ ಮಾಡುವುದಾಗಿ ವಾಣಿ ಹೇಳಿದ್ದಾರೆ.

ಎನ್.ಟಿ. ರಾಮರಾವ್ ಅವರ ಸಿನಿಮಾದ ನಾಯಕಿಯರಲ್ಲೊಬ್ಬರಾದ ವಾಣಿ ಟಿಡಿಪಿ ಸೇರುವಂತೆ ಪಕ್ಷ ಒತ್ತಾಯಿಸಿತ್ತು. ತೆಲುಗು ಸಿನಿಮಾದಲ್ಲಿ ಮಿಂಚಿದ್ದ ಆಕೆ ತೆಲಂಗಾಣ ಮತ್ತು ಆಂಧ್ರದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.1992ರಲ್ಲಿ ತೆರೆ ಕಂಡ ಸಾಮ್ರಾಟ್ ಅಶೋಕ ಎಂಬ ಸಿನಿಮಾದಲ್ಲಿ ಅಶೋಕ ಚಕ್ರವರ್ತಿಯಾಗಿ ಎನ್‍ಟಿಆರ್ ನಟಿಸಿದಾಗ, ರಾಜ ಪತ್ನಿಯಾಗಿ ವಾಣಿ ಬಣ್ಣ ಹಚ್ಚಿದ್ದರು.

ನಗರಿ ಕ್ಷೇತ್ರದಲ್ಲಿ ನಟಿ ರೋಜಾ ಈಗ ಶಾಸಕಿಯಾಗಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ಪ್ರತಿನಿಧಿಯಾದ ರೋಜಾ ಅವರನ್ನು ಪರಾಭವಗೊಳಿಸಲು ಮತ್ತೊಬ್ಬ ನಟಿಯನ್ನು ಕಣಕ್ಕಿಳಿಸುವ ಕಾರ್ಯತಂತ್ರವನ್ನು ನಾಯ್ಡು ಇಲ್ಲಿ  ಮಾಡುತ್ತಿದ್ದಾರೆ.  ತೆಲುಗುದೇಶಂ ಪಾರ್ಟಿಯಿಂದ ರೋಜಾ ವೈಎಸ್ಆರ್ ಕಾಂಗ್ರೆಸ್‍ಗೆ ಪಕ್ಷಾಂತರಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !