ಪಾಕ್‌ ಗಡಿಯಲ್ಲಿ ವಾಯುಪಡೆ ಸಮರಾಭ್ಯಾಸ

ಶುಕ್ರವಾರ, ಮೇ 24, 2019
26 °C

ಪಾಕ್‌ ಗಡಿಯಲ್ಲಿ ವಾಯುಪಡೆ ಸಮರಾಭ್ಯಾಸ

Published:
Updated:
Prajavani

ಪೋಖರಣ್ (ರಾಜಸ್ಥಾನ):  ಭಾರತೀಯ ವಾಯುಪಡೆಯು ರಾಜಸ್ಥಾನದ ಪೋಖರಣ್‌ನಲ್ಲಿ ಶನಿವಾರ ತನ್ನ ಎಲ್ಲಾ ಯುದ್ಧವಿಮಾನಗಳು ಮತ್ತು ಕದನ ಹೆಲಿಕಾಪ್ಟರ್‌ಗಳ ದಾಳಿ ಸಾಮರ್ಥ್ಯದ ಪ್ರಾತ್ಯಕ್ಷಿಕೆ ನಡೆಸಿದೆ.

ಪೂರ್ವನಿಯೋಜಿತವಾಗಿದ್ದ ‘ವಾಯುಶಕ್ತಿ 2019’ ಕಾರ್ಯಕ್ರಮದ ಅಂಗವಾಗಿ ಈ ಪ್ರಾತ್ಯಕ್ಷಿಕೆ ನಡೆದಿದೆ. ಆದರೆ ಪಾಕಿಸ್ತಾನದ ಗಡಿಯ ಬಳಿಯಲ್ಲಿ ಶಕ್ತಿ ಪ್ರದರ್ಶನ ನಡೆದಿರುವುದರಿಂದ ಇದು ಮಹತ್ವ ಪಡೆದುಕೊಂಡಿದೆ.

ಎಲ್ಲಾ ಯುದ್ಧವಿಮಾನಗಳು ಮತ್ತು ಕದನ ಹೆಲಿಕಾಪ್ಟರ್‌ಗಳು ನೆಲದ ಮೇಲಿನ ಗುರಿಗಳ ಮೇಲೆ ಬಾಂಬ್ ದಾಳಿ ನಡೆಸಿದವು. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆ ಅಧಿಕಾರಿಗಳು ಈ ಪ್ರಾತ್ಯಕ್ಷಿಕೆಗೆ ಸಾಕ್ಷಿಯಾದರು.

Tags: 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !