ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ನಡವಳಿಕೆ ಪ್ರದರ್ಶಿಸಲು ನಾಯ್ಡು ಕರೆ

Last Updated 27 ಜುಲೈ 2019, 19:16 IST
ಅಕ್ಷರ ಗಾತ್ರ

ಮುಂಬೈ: ಕೆಲವು ಮಸೂದೆ ಅಂಗೀಕಾರಕ್ಕೆ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮೇಲ್ಮನೆಯ ‘ಕೆಲವು ಗುಂಪುಗಳ’ ವರ್ತನೆಯಿಂದ ಬೇಸರವಾಗಿದ್ದು, ಸಂಸತ್ತಿನ ಯಶಸ್ವಿ ಕಾರ್ಯ ನಿರ್ವಹಣೆಗೆ ಆದರ್ಶ ನಡವಳಿಕೆ ಪ್ರದರ್ಶಿಸುವಂತೆ ಸಂಸದರಿಗೆ ಅವರು ಸಲಹೆ ನೀಡಿದ್ದಾರೆ.

‘ನಿಯಮಗಳಿಗೆ ಗೌರವ ಕೊಡದಿರುವುದು, ಸಂಪ್ರದಾಯಗಳನ್ನು ಮೀರುವುದು ಹಾಗೂ ಸಭಾಪತಿಯ ಪೀಠದ ಎದುರು ಗದ್ದಲ ಎಬ್ಬಿಸುವ ವರ್ತನೆಗಳು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.ಗುರುವಾರ ಆರ್‌ಟಿಐ ತಿದ್ದುಪಡಿ ಮಸೂದೆ ಕುರಿತ ಚರ್ಚೆಯಲ್ಲಿ ಹೈಡ್ರಾಮಾ ನಡೆದಿತ್ತು.

ಬಿಜೆಪಿ ಮಹಿಳಾ ಸಂಸದರೊಬ್ಬರ ವಿರುದ್ಧ ಎಸ್‌ಪಿ ಸಂಸದ ಅಜಂ ಖಾನ್ ನೀಡಿದ ಹೇಳಿಕೆಯನ್ನು ಸಹ ವೆಂಕಯ್ಯ ನಾಯ್ಡು ಖಂಡಿಸಿದರು. ಖಾನ್ ಹೇಳಿಕೆಯು ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT