ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಭಾಷೆ ಮಾತನಾಡಿ ಗಮನ ಸೆಳೆದ ವೆಂಕಯ್ಯ ನಾಯ್ಡು

Last Updated 19 ಜುಲೈ 2018, 14:10 IST
ಅಕ್ಷರ ಗಾತ್ರ

ನವದೆಹಲಿ:ರಾಜ್ಯಸಭೆಯಲ್ಲಿ ಇನ್ನು ಮುಂದೆ 22 ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡಬಹುದುಎಂದು ಮುಂಗಾರು ಅಧಿವೇಶನದ ಆರಂಭದ ದಿನ ಘೋಷಿಸಿದ ಸಭಾಪತಿ, ಉಪರಾಷ್ಟ್ರಪತಿವೆಂಕಯ್ಯ ನಾಯ್ಡು ಅವರು 10 ಭಾಷೆಗಳಲ್ಲಿ ಮಾತನಾಡಿ ಗಮನ ಸೆಳೆದರು.

ರಾಜ್ಯಸಭಾ ಸದಸ್ಯರಿಗೆ ಇದುವರೆಗೆ ಮಾತನಾಡಲು ಅವಕಾಶವಿದ್ದ 17 ಭಾಷೆಗಳ ಜೊತೆಗೆ ಇದೀಗ ಕೊಂಕಣಿ, ಡೋಗ್ರಿ, ಕಾಶ್ಮೀರಿ, ಸಂಥಾಲಿ ಮತ್ತು ಸಿಂಧಿಯಂತಹ ಐದು ಪ್ರಾದೇಶಿಕ ಭಾಷೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಈಕುರಿತು ಮಾಹಿತಿ ನೀಡುವ ವೇಳೆ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ತಮಿಳು ಹಾಗೂ ತೆಲುಗು ಭಾಷೆಗಳ ಕೆಲವು ಪದಗಳನ್ನು ಮಾತನಾಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರು, ಸಂಸ್ಕೃತದಲ್ಲೂ ಮಾತನಾಡುವಂತೆ ಸಲಹೆ ನೀಡಿ ಹಾಸ್ಯ ಮಾಡಿದರು.

ಸದ್ಯ ರಾಜ್ಯಸಭೆಯಲ್ಲಿ 22 ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಲು ಅವಕಾಶ ದೊರೆತಂತಾಗಿದೆ.ಆದರೆ, ಭಾಷಾಂತರಕಾರರ ನೇಮಕ ಮಾಡಬೇಕಿರುವುದರಿಂದ ಸದಸ್ಯರು ಮುಂಚಿತವಾಗಿ ರಾಜ್ಯಸಭಾ ಕಚೇರಿಗೆ ಮನವಿ ಸಲ್ಲಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT