ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಸಿಎಂ ನಿವಾಸದಲ್ಲಿ ಸಾಕು ನಾಯಿ ಸಾವು: ವೈದ್ಯರ ವಿರುದ್ಧ ದೂರು ದಾಖಲು

Last Updated 15 ಸೆಪ್ಟೆಂಬರ್ 2019, 3:01 IST
ಅಕ್ಷರ ಗಾತ್ರ

ಹೈದರಾಬಾದ್‌:ತೆಲಂಗಾಣಮುಖ್ಯಮಂತ್ರಿಕೆ.ಚಂದ್ರಶೇಖರ್ರಾವ್‌ ಅವರ ನಿವಾಸದಲ್ಲಿ ಸಾಕು ನಾಯಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪಶು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೆ.ಚಂದ್ರಶೇಖರ್ರಾವ್‌ ಅವರ ಅಧಿಕೃತ ನಿವಾಸ ಪ್ರಗತಿಭವನದಲ್ಲಿದ್ದ11 ತಿಂಗಳ ಸಾಕು ನಾಯಿ ‘ಹಾಸ್ಕಿ‘ ಅನಾರೋಗ್ಯದಿಂದಬಳಲುತ್ತಿತ್ತು. ಇದನ್ನು ಪೋಷಣೆ ಮಾಡುವ ಮುಖ್ಯಮಂತ್ರಿಗಳ ಸಿಬ್ಬಂದಿ ಖಾಸಗಿ ಪಶುಚಿಕಿತ್ಸಾಲಯದಲ್ಲಿಚಿಕಿತ್ಸೆಕೊಡಿಸಿದ್ದರು. ವೈದ್ಯರು ಇಂಜಕ್ಷನ್‌ ನೀಡಿದ ಕೆಲವೇ ಗಂಟೆಗಳಲ್ಲಿಹಾಸ್ಕಿಸಾವನ್ನಪಿದೆ.

ವೈದ್ಯರ ನಿರ್ಲಕ್ಷ್ಯದಿಂದಹಾಸ್ಕಿಸಾವನ್ನಪಿದೆಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿಬ್ಬಂದಿ,ಐಪಿಸಿಸೆಕ್ಷನ್429 ಮತ್ತು ಪ್ರಾಣಿ ಹತ್ಯೆತಡೆಕಾಯ್ದೆ11(4) ರ ಅಡಿಯಲ್ಲಿ ವೈದ್ಯರಾದ ಲಕ್ಷ್ಮಿ ಮತ್ತು ರಂಜಿತ್‌ ವಿರುದ್ಧಇಲ್ಲಿನಬಂಜಾರಹಿಲ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಜೆಪಿಟೀಕೆ

ವೈದ್ಯರ ವಿರುದ್ಧ ದೂರು ದಾಖಲಿಸಿರುವುದನ್ನು ವಿರೋಧ ಪಕ್ಷಬಿಜೆಪಿಖಂಡಿಸಿದೆ. ತೆಲಂಗಾಣದಲ್ಲಿ ಜನರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ, ಸಾಕು ನಾಯಿ ಮೇಲೆ ತೋರಿಸಿದ ಪ್ರೀತಿಯಲ್ಲಿ ಅರ್ಧದಷ್ಟು ಜನರ ಮೇಲೆ ತೋರಿಸಿದ್ದಾರೆ ಸಾಕಷ್ಟು ಜನರು ಡೆಂಗ್ಯೂಪೀಡಿತರಾಗುತ್ತಿರಲಿಲ್ಲಎಂದು ಬಿಜೆಪಿಯ ವಕ್ತಾರಕೆ. ಕೃಷ್ಣಸಾಗರ್ರಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT