ಭಾನುವಾರ, ಆಗಸ್ಟ್ 18, 2019
26 °C

‘ವತನ್‌’ ವಿಡಿಯೊ ಬಿಡುಗಡೆ

Published:
Updated:

ನವದೆಹಲಿ (ಪಿಟಿಐ): ಸ್ವಾತಂತ್ರ್ಯೋತ್ಸವ ದಿನದ ಸಂಭ್ರಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶಪ್ರೇಮ ಬಿಂಬಿಸುವ ‘ವತನ್‌’ ಹೆಸರಿನ ವಿಡಿಯೊ ಅನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಈ ವಿಡಿಯೊ ಬಿಡುಗಡೆ ಮಾಡಿದರು. ದೂರದರ್ಶನ ನಿರ್ಮಿಸಿರುವ ಈ ವಿಡಿಯೊದಲ್ಲಿ ದೇಶದ ವಿವಿಧ ಸ್ಥಳಗಳು ಮತ್ತು ಸರ್ಕಾರದ ಸಾಧನೆಗಳನ್ನು ಬಿಂಬಿಸಲಾಗಿದೆ. ಗೀತೆಯನ್ನು ಜಾವೇದ್‌ ಅಲಿ ಹಾಡಿದ್ದಾರೆ.

ಕೇರಳದ ವೈಭವ, ರಾಜಸ್ಥಾನದ ಮರುಭೂಮಿ, ಈಶಾನ್ಯ ರಾಜ್ಯಗಳ ಹಸಿರು ಸೌಂದರ್ಯ ಹಾಗೂ ಗಗನದಲ್ಲಿ ಯುದ್ಧ ವಿಮಾನಗಳ ಸಾಹಸ ಮತ್ತು ಸೈನಿಕರ ಶೌರ್ಯವನ್ನು ಬಿಂಬಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ದೇಶದ ಅತ್ಯಂತ ವೇಗದ ರೈಲು ‘ವಂದೇ ಭಾರತ ಎಕ್ಸ್‌ಪ್ರೆಸ್‌’ಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿರುವುದು ಮತ್ತು ಯೋಗ ದಿನಾಚರಣೆಯನ್ನು ಪ್ರದರ್ಶಿಸಲಾಗಿದೆ. ‘ಚಂದ್ರಯಾನ–2’ ಸಾಧನೆಯೂ ಇದರಲ್ಲಿದೆ.

Post Comments (+)