ಬುಧವಾರ, ನವೆಂಬರ್ 20, 2019
22 °C

ತೆಲಂಗಾಣ ಸಿ.ಎಂ ನಿವಾಸದ ನಾಯಿ ಸಾವು: ಪ್ರಕರಣ ದಾಖಲು

Published:
Updated:

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಅಧಿಕೃತ ನಿವಾಸ ‘ಪ್ರಗತಿ ಭವನ’ದಲ್ಲಿನ ನಾಯಿ ಮೃತಪಟ್ಟಿರುವ ಸಂಬಂಧ ಇಬ್ಬರು ಪಶುವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

ನಾಯಿಯ ಉಸ್ತುವಾರಿ ಹೊಣೆ ಹೊತ್ತಿದ್ದ ವ್ಯಕ್ತಿ ಸೆ.12ರಂದು ನೀಡಿದ ದೂರಿನ ಅನ್ವಯ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಚಿಕಿತ್ಸೆ ನೀಡುವಲ್ಲಿ ಪಶುವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ 11 ತಿಂಗಳಿನ ಶ್ವಾನ ಸೆ.11ರಂದು ಮೃತಪಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿರೋಧಪಕ್ಷಗಳ ಟೀಕೆ: ಪ್ರಕರಣ ದಾಖಲಾಗಿರುವ ಕುರಿತು ಕಾಂಗ್ರೆಸ್, ಬಿಜೆಪಿ ಟೀಕೆ ವ್ಯಕ್ತಪಡಿಸಿವೆ.

ಪ್ರತಿಕ್ರಿಯಿಸಿ (+)