ರಾಮಮಂದಿರ ನಿರ್ಮಾಣ ಚಳವಳಿ ಪುನರಾರಂಭ

7
ವಿಶ್ವ ಹಿಂದೂ ಪರಿಷತ್‌ ಸಭೆಯಲ್ಲಿ ನಿರ್ಣಯ

ರಾಮಮಂದಿರ ನಿರ್ಮಾಣ ಚಳವಳಿ ಪುನರಾರಂಭ

Published:
Updated:

ನವದೆಹಲಿ/ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಚಳವಳಿಯನ್ನು ಪುನರಾರಂಭಿಸುವ ಸುಳಿವನ್ನು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ನೀಡಿದೆ. 

ವಿವಾದಕ್ಕೆ ಸಂಬಂಧಿಸಿ ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡದಿದ್ದರೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಂತರ ಜತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪರಿಷತ್‌ನ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಪರಿಷತ್‌ನ ಸಭೆಯ ಬಳಿಕ ಮಾಧ್ಯಮಗೋಷ್ಠಿ ಉದ್ದೇಶಿಸಿ ಅಲೋಕ್‌ ಮಾತನಾಡಿದರು. ಗೋರಕ್ಷಣೆ ಮತ್ತು ದೇಶದೊಳಕ್ಕೆ ರೋಹಿಂಗ್ಯಾ ಸಮುದಾಯದ ಮುಸ್ಲಿಮರ ವಲಸೆ ಬಗ್ಗೆ ಎರಡು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.  ರಾಮಮಂದಿರ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ ಎಂದ ಅವರು, ಸುಪ್ರೀಂ ಕೋರ್ಟ್‌ ಆದೇಶಕ್ಕೆ ಕಾಯುವ ಪರಿಷತ್‌ನ ನಿಲುವನ್ನು ಪುನರುಚ್ಚರಿಸಿದರು. 

ಗೋರಕ್ಷಣೆಗೆ ಸಚಿವಾಲಯಕ್ಕೆ ಒತ್ತಾಯ: ಭಾರತೀಯ ಗೋವು ತಳಿಯನ್ನು ಸಂರಕ್ಷಿಸುವುದಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ವಿಎಚ್‌ಪಿ ಒತ್ತಾಯಿಸಿದೆ. ಸಾವಯವ ಕೃಷಿ ಮತ್ತು ಪರಿಸರದ ರಕ್ಷಣೆ ಇದರಿಂದ ಸಾಧ್ಯವಾಗುತ್ತದೆ. ಪ್ರತ್ಯೇಕ ಸಚಿವಾಲಯದಿಂದ ಗಾಂಧೀಜಿ ಅವರ ಸ್ವರಾಜ್ಯ ದೃಷ್ಟಿಕೋನ ಮತ್ತು ಇತರ ಸಿದ್ಧಾಂತ ಪಾಲಿಸಿದಂತಾಗುತ್ತದೆ ಎಂದಿದೆ. 

ಗೋರಕ್ಷಣೆಗೆ ಸಚಿವಾಲಯಕ್ಕೆ ಒತ್ತಾಯ

ಭಾರತೀಯ ಗೋವು ತಳಿಯನ್ನು ಸಂರಕ್ಷಿಸುವುದಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ವಿಎಚ್‌ಪಿ ಒತ್ತಾಯಿಸಿದೆ. 

ಸಾವಯವ ಕೃಷಿ ಮತ್ತು ಪರಿಸರದ ರಕ್ಷಣೆ ಇದರಿಂದ ಸಾಧ್ಯವಾಗುತ್ತದೆ. ಪ್ರತ್ಯೇಕ ಸಚಿವಾಲಯದ ರಚನೆಯಿಂದ ಮಹಾತ್ಮ ಗಾಂಧಿ ಅವರ ಸ್ವರಾಜ್ಯ ದೃಷ್ಟಿಕೋನ ಮತ್ತು ಇತರ ಸಿದ್ಧಾಂತಗಳನ್ನು ಪಾಲಿಸಿದಂತಾಗುತ್ತದೆ ಎಂದು ವಿಎಚ್‌ಪಿ ಹೇಳಿದೆ. 

‘ಗೋ ಹತ್ಯೆ ಮತ್ತು ಗೋವಿನ ಕಳ್ಳ ಸಾಗಾಟವನ್ನು ನಿಷೇಧಿಸಿರುವ ರಾಜ್ಯಗಳಲ್ಲಿ ಕಾನೂನುಬಾಹಿರವಾಗಿ ಇಂತಹ ಕೃತ್ಯಗಳು ನಡೆಯುತ್ತಿದ್ದರೆ ಅದನ್ನು ವಿಎಚ್‌ಪಿಯ ಸ್ವಯಂಸೇವಕರು ಕಾನೂನುಬದ್ಧ ಕ್ರಮಗಳ ಮೂಲಕ ತಡೆಯುತ್ತಿದ್ದಾರೆ. ಕಾನೂನನ್ನು ಸಮಗ್ರವಾಗಿ ಜಾರಿ ಮಾಡಲು ಎಲ್ಲ ಪೌರರ ಮುಂದಾಗಬೇಕು’ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ. 

ಯೋಗಿ ಬೆಂಬಲ

ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಸಂತರ ಭಾವನೆಗಳನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಅವರು ತಮ್ಮ ವಿರೋಧಿಗಳ ಪಿತೂರಿಗೆ ಬಲಿ ಬೀಳಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. 

ಕಳೆದ ಮಾರ್ಚ್‌ನಲ್ಲಿ ಅಧಿಕಾರಕ್ಕೆ ಬಂದ ಬಳಿಕ ಆರನೇ ಬಾರಿ ಅಯೋಧ್ಯೆಗೆ ಭೇಟಿ ನೀಡಿದ ಯೋಗಿ, ರಾಮಜನ್ಮಭೂಮಿ ಟ್ರಸ್ಟ್‌ನ ಮಹಾಂತ ನೃತ್ಯ ಗೋಪಾಲ ದಾಸ್‌ ಅವರ 80ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರಜಾಪ್ರಭುತ್ವ
ದಲ್ಲಿ ಯಾವುದೇ ಸರ್ಕಾರ ನ್ಯಾಯಾಂಗವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. 

ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಹಲವು ಸಂತರು ಕಾರ್ಯಕ್ರಮದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಯೋಗಿ ಮಾತನಾಡಿದರು.

ಅಲಿಗಡದಲ್ಲಿ ಯಾಕೆ ಮೀಸಲಾತಿ ಇಲ್ಲ: ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಅಥವಾ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಾತಿ ಯಾಕೆ ದೊರಕುವುದಿಲ್ಲ ಎಂದು ಯೋಗಿ ಆದಿತ್ಯನಾಥ ಪ್ರಶ್ನಿಸಿದ್ದಾರೆ. ದುರ್ಬಲ ವರ್ಗಗಳ ಬಗ್ಗೆ ಕಾಳಜಿ ಇದೆ ಎಂದು ಹೇಳಿಕೊಳ್ಳುವವರು ಈ ವಿಚಾರದಲ್ಲಿ ಮೌನವಾಗಿರುವುದು ಯಾಕೆ ಎಂದೂ ಅವರು ಕೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !