ಬುಧವಾರ, ಫೆಬ್ರವರಿ 26, 2020
19 °C

40ರ ನಂತರ ಮಹಿಳೆಯರು ಹೆಚ್ಚು ನಾಟಿ–ಹಾಟಿ ಆಗ್ತಾರೆ: ವಿದ್ಯಾ ಬಾಲನ್‌

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಹಿಳೆಯರು 40 ವರ್ಷದ ಬಳಿಕ ಹೆಚ್ಚು ನಾಟಿ ಮತ್ತು ಹಾಟ್‌ ಆಗ್ತಾರೆ’ ಎಂದು ಹೇಳುವ ಮೂಲಕ ಸರಳ ಸುಂದರಿ ವಿದ್ಯಾ ಬಾಲನ್‌ ಮತ್ತೆ ಸುದ್ದಿಯಲ್ಲಿದ್ದಾರೆ.

ಇದೇ ವರ್ಷ 40ರ ವಸಂತಕ್ಕೆ ಕಾಲಿಟ್ಟ ಡರ್ಟಿ ಪಿಕ್ಚರ್‌ ಖ್ಯಾತಿಯ ನಟಿ ವಿದ್ಯಾ ಬಾಲನ್‌ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ರೀತಿ ಹೇಳಿದ್ದಾರೆ.

ಇದನ್ನೂ ಓದಿ: ಬೆನ್ನ ಹಿಂದೆ ಅಮಿತಾಬ್‌ ಚಿತ್ರ, ಬೆಚ್ಚಿಬಿದ್ದ ರೇಖಾ  

ವಯಸ್ಸಾದಂತೆ ಹೇಗೆ ಮಹಿಳೆಯರು ಹೆಚ್ಚು ಖುಷಿಯಾಗಿ ಮತ್ತು ಆತ್ಮವಿಶ್ವಾಸವನ್ನು ಗಳಿಸುತ್ತಾರೆ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸಾಮಾನ್ಯವಾಗಿ ನಾವೆಲ್ಲ ಸಂಕೋಚದಿಂದಿರಬೇಕು ಮತ್ತು ಲೈಂಗಿಕತೆಯನ್ನು ಸುಖಿಸಬಾರದು ಎಂದೇ ಕಲಿತಿರುತ್ತೇವೆ. ಆದರೆ, ವಯಸ್ಸಾದಂತೆ ಮಹಿಳೆಯರು ಹೆಚ್ಚು ಸ್ಥಿತಪ್ರಜ್ಞರಾಗುತ್ತಾರೆ. ಏಕೆಂದರೆ, ಆಗ ಬೇರೆಯವರ ಬಗ್ಗೆ ಹೆಚ್ಚು ಅವರು ತಲೆಕಡಿಸಿಕೊಳ್ಳುವುದಿಲ್ಲ. ಕೇವಲ ಅವರ ಬಗ್ಗೆಯಷ್ಟೇ ಯೋಚಿಸುತ್ತಿರುತ್ತಾರೆ. ಇದರಿಂದ ಹೆಚ್ಚು ಖುಷಿಯಾಗಿರುತ್ತಾರೆ’ ಎಂದು ಹೇಳಿದರು. 

‘ನನ್ನ ಸ್ನೇಹಿತನೊಬ್ಬ ಬಹಳ ದಿನಗಳಿಂದ, ಪ್ರೇಮ ಸಂಬಂಧ ಕಡಿದುಕೊಳ್ಳುವ ಬಗ್ಗೆ ಮಹಿಳೆಯೊಂದಿಗೆ ಮಾತುಕತೆ ನಡೆಯುತ್ತಲೇ ಇತ್ತು. 35ರ ನಂತರ ಆಕೆ ಆ ಬಗ್ಗೆ ತಲೆಕಡಿಸಿಕೊಳ್ಳುವುದನ್ನೇ ಬಿಟ್ಟಳಂತೆ. 40ರ ನಂತರವಂತೂ ಕೇಳುವುದೇ ಬೇಡ ಎಂದು ಅವನು ಹೇಳುತ್ತಿರುತ್ತಾನೆ’ ಎಂದು ನಗುತ್ತಲೇ ತಮ್ಮ ಮಾತು ಮುಗಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು