ಪ್ರಚಾರ ಕಣಕ್ಕೆ ವಿಜಯಕಾಂತ್‌

ಶುಕ್ರವಾರ, ಏಪ್ರಿಲ್ 26, 2019
24 °C

ಪ್ರಚಾರ ಕಣಕ್ಕೆ ವಿಜಯಕಾಂತ್‌

Published:
Updated:
Prajavani

ಚೆನ್ನೈ: ಡಿಎಂಡಿಕೆ ಮುಖ್ಯಸ್ಥ ಹಾಗೂ ನಟ ವಿಜಯಕಾಂತ್ ಅವರು ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದ ಪರವಾಗಿ ರಾಜಧಾನಿಯ ಮೂರು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. 

ತಮಿಳುನಾಡಿನಲ್ಲಿ ಎನ್‌ಡಿಎ ಭಾಗವಾಗಿರುವ ಡಿಎಂಡಿಕೆ, ಉತ್ತರ ಚೆನ್ನೈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಅಳಗಪ್ಪನ್ ಮೋಹನ್ ರಾಜ್ ಸೇರಿದಂತೆ ಚೆನ್ನೈನ ಮೂರು ಮತಕ್ಷೇತ್ರಗಳ ಅಭ್ಯರ್ಥಿಗಳ ಪರ ಅವರು ಸೋಮವಾರ ಪ್ರಚಾರ ನಡೆಲಿದ್ದಾರೆ. 

ಪಕ್ಷದ ತಾರಾ ಪ್ರಚಾರಕರೂ ಆಗಿರುವ ವಿಜಯಕಾಂತ್, ಅನಾರೋಗ್ಯದ ಕಾರಣ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದರು. ಇವರ ಪಕ್ಷಕ್ಕೆ ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಮೈತ್ರಿಕೂಟದಲ್ಲಿ ಎಐಎಡಿಎಂಕೆ, ಎಂಡಿಎಂಕೆ, ಬಿಜೆಪಿ, ಪಿಎಂಕೆ, ತಮಿಳು ಮಾನಿಲ ಕಾಂಗ್ರೆಸ್ ಪಕ್ಷಗಳು ಇವೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !