ಶುಕ್ರವಾರ, ಏಪ್ರಿಲ್ 10, 2020
19 °C

ಮರಣ ಪತ್ರದಲ್ಲಿ ಉಜ್ವಲ ಭವಿಷ್ಯಕ್ಕೆ ಪ್ರಾರ್ಥಿಸಿದ ಗ್ರಾಮ ಪಂಚಾಯ್ತಿ ಮುಖ್ಯಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ  ಪ್ರದೇಶ: ಯಾರಾದರೂ ಮೃತರಿಗೆ ಉತ್ತಮ ಭವಿಷ್ಯ ಹಾರೈಸುವ ಘಟನೆ ಕೇಳಿದ್ದೀರಾ? ಉತ್ತರ ಪ್ರದೇಶದ ಉನ್ನಾವೋ ಜಲ್ಲೆಯಲ್ಲಿ ಗ್ರಾಮ ಪಂಚಾಯತ್‌ ಮುಖ್ಯಸ್ಥರೊಬ್ಬರು ಮರಣ ಪ್ರಮಾಣ ಪತ್ರದಲ್ಲಿ ಮೃತರಿಗೆ ಉತ್ತಮ ಭವಿಷ್ಯಕ್ಕಾಗಿ ಹಾರೈಸಿದ ಅಪರೂಪದ ಘಟನೆ ನಡೆದಿದೆ.

ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಮೀ ಶಂಕರ್ ಎನ್ನುವವರು ಇಲ್ಲಿನ ಸಿರ್ವರಿಯಾ ಗ್ರಾಮದಲ್ಲಿ ಜನವರಿ 22ರಂದು ಮೃತಪಟ್ಟಿದ್ದರು.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ತಂದೆಯ ಮರಣ ಪ್ರಮಾಣ ಪತ್ರ ನೀಡುವಂತೆ ಮಗ ಗ್ರಾಮ ಪಂಚಾಯತಿ ಮುಖ್ಯಸ್ಥ ಬಾಬುಲ್ ಅವರನ್ನು ಕೇಳಿಕೊಂಡಿದ್ದರು.

ಅದರಂತೆ ಮರಣ ಪ್ರಮಾಣ ಪತ್ರ ನೀಡಿದ್ದು, ಅದರಲ್ಲಿ ಮೃತರ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ. ಮರಣ ಪ್ರಮಾಣ ಪತ್ರದಲ್ಲಿ ‘ನಾನು ಅವರ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ (ಮೇ ಇನ್‌ಕೆ ಉಜ್ವಲ್ ಕಿ ಕಾಮನ ಕರ್ತಾ ಹೂ) ಎಂದು ಬರೆದಿದ್ದಾರೆ. 

ಮರಣ ಪ್ರಮಾಣ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದು, ತಮ್ಮ ತಪ್ಪಿಗಾಗಿ ಕ್ಷಮೆ ಯಾಚಿಸಿರುವ ಅವರು ಹೊಸ ಮರಣ ಪ್ರಮಾಣ ಪತ್ರವನ್ನು ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು