ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣ ವೆಚ್ಚ ಭರಿಸುವೆ: ಸೆಹ್ವಾಗ್

ಶನಿವಾರ, ಮೇ 25, 2019
27 °C

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣ ವೆಚ್ಚ ಭರಿಸುವೆ: ಸೆಹ್ವಾಗ್

Published:
Updated:

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸಲು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮುಂದೆ ಬಂದಿದ್ದಾರೆ.

ನಾವು ಅವರಿಗೆ ಎಷ್ಟು ಸಹಾಯ ಮಾಡಿದರೂ ಸಾಲುವುದಿಲ್ಲ. ಆದರೆ ಕಡೇ ಪಕ್ಷ  ಪುಲ್ವಾಮದಲ್ಲಿ ಹುತಾತ್ಮರಾದ ಧೀರ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನನ್ನ ಸೆಹ್ವಾಗ್ ಇಂಟರ್ ನ್ಯಾಷನಲ್ ಸ್ಕೂಲ್ ಭರಿಸಲು ಸಿದ್ಧವಿದೆ. ಇದಕ್ಕೆ ಅನುಮತಿ ನೀಡಿದರೆ ಅದೇ ನನ್ನ ಸೌಭಾಗ್ಯ ಎಂದು ಸೆಹ್ವಾಗ್ ಟ್ವೀಟಿಸಿದ್ದಾರೆ.

ಹರಿಯಾಣ ಪೊಲೀಸ್ ಪಡೆಯಲ್ಲಿರುವ ಬಾಕ್ಸರ್ ವಿಜೇಂದರ್ ಸಿಂಗ್, ಈ ತಿಂಗಳ ಸಂಬಳವನ್ನು ಹುತಾತ್ಮರ ಕುಟುಂಬಕ್ಕೆ ನೀಡುವುದಾಗಿ ಹೇಳಿದ್ದಾರೆ.

ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರ ಕುಟುಂಬಕ್ಕಾಗಿ ನಾನು ನನ್ನ ಒಂದು ತಿಂಗಳ ಸಂಬಳವನ್ನು ನೀಡುತ್ತೇನೆ. ಈ ಕುಟುಂಬಗಳಿಗೆ ಸಹಾಯ ಮಾಡಲು ಎಲ್ಲರೂ ಮುಂದೆ ಬರಬೇಕು. ಅವರ ಜತೆ ನಾವು ನಿಲ್ಲಬೇಕಾದುದು ನಮ್ಮ ಕರ್ತವ್ಯ, ಅವರ ಬಲಿದಾನದ ಬಗ್ಗೆ ಹೆಮ್ಮೆ ಪಡುವಂತಾಗಲಿ. ಜೈ ಹಿಂದ್ ಎಂದು ವಿಜೇಂದರ್ ಸಿಂಗ್ ಟ್ವೀಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !