ವೀಸಾ ದುರ್ಬಳಕೆ : 20 ಮಹಿಳೆಯರ ಬಂಧನ

ಶನಿವಾರ, ಮಾರ್ಚ್ 23, 2019
31 °C

ವೀಸಾ ದುರ್ಬಳಕೆ : 20 ಮಹಿಳೆಯರ ಬಂಧನ

Published:
Updated:

ಹೈದರಾಬಾದ್: ವೀಸಾ ದುರ್ಬಳಕೆ ಮಾಡಿಕೊಂಡು ಪ್ರಯಾಣ ಮಾಡಲು ಯತ್ನಿಸಿದ 20 ಮಹಿಳೆಯರನ್ನು ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಪ್ರವಾಸಿ ವೀಸಾ ಪಡೆದು, ವೃತ್ತಿ ವೀಸಾ ಪಡೆದವರು ಸಾಗುವ ಗೇಟ್‌ನಿಂದ ಹೋಗಲು ಯತ್ನಿಸಿದ್ದಾರೆ. ಇದಕ್ಕೆ ಅವಕಾಶವಿಲ್ಲ. ಈ ಬಗ್ಗೆ ಬಂಧಿತ ಮಹಿಳೆಯರನ್ನು ವಿಚಾರಣೆ ನಡೆಸುತಿದ್ದೇವೆ ಎಂದು ವಿಮಾನ ನಿಲ್ದಾಣದ ಪೊಲೀಸ್‌ ಅಧಿಕಾರಿ ವಿಜಯ್ ಭಾಸ್ಕರ್‌ ರೆಡ್ಡಿ ತಿಳಿಸಿದ್ದಾರೆ.

‘ಗಲ್ಫ್‌ ಸೇರಿ ಹಲವು ರಾಷ್ಟ್ರಗಳಿಗೆ ಉದ್ಯೋಗ ನಿಮಿತ್ತ ವಲಸೆ ಹೋಗುವವರಿಗೆ ವೃತ್ತಿ ವಲಸೆ ಅನುಮತಿ ಪಡೆದ ಮುದ್ರೆ ಬೇಕಾಗುತ್ತದೆ’ ಎಂದಿದ್ದಾರೆ.

‘ಉದ್ಯೋಗ ಕೊಡಿಸುವ ನೆಪದಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಇದನ್ನು ತಡೆಯಲು ಹಲವಾರು ಕ್ರಮಕೈಗೊಂಡಿದ್ದೇವೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !