ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಅಧಿಕಾರದಲ್ಲಿರುವವರು ರಾಮಮಂದಿರದ ಭರವಸೆ ನೀಡಿದ್ದರು: ಭಯ್ಯಾಜಿ ಜೋಷಿ

Last Updated 9 ಡಿಸೆಂಬರ್ 2018, 10:30 IST
ಅಕ್ಷರ ಗಾತ್ರ

ದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆಯನ್ನು ಈಡೇರಿಸದೇ ಇರುವುದಕ್ಕೆ ಬಿಜೆಪಿ ವಿರುದ್ಧ ಗುಡುಗಿದ ಆರ್‌ಎಸ್‌ಎಸ್‌ ಹಿರಿಯ ನಾಯಕ ಸುರೇಶ್ ಭಯ್ಯಾಜಿ ಜೋಷಿ, ಅಗತ್ಯ ಬಂದರೆ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಹೇಳಿದ್ದಾರೆ.

ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ವಿಎಚ್‍ಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು ಅವರು.ಈಗ ಅಧಿಕಾರದಲ್ಲಿರುವವರು ರಾಮ ಮಂದಿರ ನಿರ್ಮಿಸುವುದಾಗಿ ಭರವಸೆ ನೀಡಿದ್ದರು.ಅವರು ಜನರ ಮಾತುಗಳನ್ನು ಆಲಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು.ಅವರಿಗೆ ಭಾವನೆಗಳು ಅರ್ಥವಾಗುತ್ತಿದೆ ಎಂದು ಬಿಜೆಪಿಯನ್ನು ಉಲ್ಲೇಖಿಸದೆ ಮಾತನಾಡಿದಜೋಷಿ ನಾವು ಒತ್ತಾಯ ಮಾಡುತ್ತಿಲ್ಲ, ನಾವು ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಿದ್ದೇವೆ. ಈ ದೇಶಕ್ಕೆ ರಾಮ ರಾಜ್ಯ ಬೇಕು ಎಂದಿದ್ದಾರೆ.

ಮಂಗಳವಾರ ಸಂಸತ್‍ನಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಅದಕ್ಕೆ ಎರಡು ದಿನ ಮುಂಚಿತವಾಗಿ ವಿಶ್ವ ಹಿಂದೂ ಪರಿಷತ್ ದೆಹಲಿಯ ರಾಮಲೀಲಾ ಮೈದಾನದಲ್ಲಿ ರ‍್ಯಾಲಿ ಆಯೋಜಿಸಿದೆ. ಅಯೋಧ್ಯೆ ಸ್ಥಳ ವಿವಾದ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ.ಜನವರಿಯಲ್ಲಿ ಈ ಪ್ರಕರಣದ ವಿಚಾರಣೆ ಆರಂಭದ ದಿನಾಂಕವನ್ನು ನ್ಯಾಯಾಲಯ ಪ್ರಕಟಿಸಲಿದೆ.

25 ವರ್ಷಗಳಿಂದ ಈ ವಿವಾದ ಇತ್ಯರ್ಥವಾಗದೇ ಉಳಿದಿದ್ದು, ಬಲಪಂಥೀಯ ಸಂಘಟನೆಗಳು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಇನ್ನು ಕಾದು ಕುಳಿತುಕೊಳ್ಳಲು ಸಾಧ್ಯವಿಲ್ಲ.ಈ ಮಸೂದೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲಿಸಬೇಕು ಎಂದು ರಾಹುಲ್ ಹೆಸರು ಉಲ್ಲೇಖ ಮಾಡದೆ ವಿಎಚ್‍ಪಿ ಕಾರ್ಯಕಾರೀ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT