ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟರ್‌ ಐಡಿ, ಐಇಡಿಗಿಂತ ಶಕ್ತಿಶಾಲಿ: ಮೋದಿ

ಭಯೋತ್ಪಾದಕರ ಹುಟ್ಟಡಗಿಸಲು ಮತ ಹಾಕಿ ಎಂದ ಪ್ರಧಾನಿ
Last Updated 23 ಏಪ್ರಿಲ್ 2019, 19:29 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ‘ನಿಮ್ಮಲ್ಲಿರುವ ವೋಟರ್ ಐಡಿಗಳು (ಮತದಾರರ ಗುರುತಿನ ಚೀಟಿ) ಭಯೋತ್ಪಾದಕರ ಕೈಯಲ್ಲಿನ ಐಇಡಿಗಳಿಗಿಂತ (ಕಚ್ಚಾ ಬಾಂಬ್‌) ಭಾರಿ ಶಕ್ತಿಶಾಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗುಜರಾತ್‌ನ ಗಾಂಧೀನಗರ ಲೋಕಸಭಾ ಕ್ಷೇತ್ರದ ರಣಿಪ್‌ನಲ್ಲಿ ಮತದಾನ ಮಾಡಿದ ನಂತರ ಮೋದಿ ಈ ಮಾತು ಹೇಳಿದರು.

‘ನನ್ನ ಹುಟ್ಟೂರಿನಲ್ಲಿ ಮತ ಹಾಕುತ್ತಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ನಿಮ್ಮ ಮತಗಳಿಂದ ಭಯೋತ್ಪಾದಕರ ಹುಟ್ಟಡಗಿಸಬಹುದು. ಹೀಗಾಗಿನೀವೆಲ್ಲರೂ ಮತ ಹಾಕಬೇಕು’ ಎಂದು ಅವರು ಕರೆ ನಿಡಿದರು.

ಇದಕ್ಕೂ ಮುನ್ನ ಅವರು ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮೋದಿ ಅವರಿಗೆ ತಾಂಬೂಲ, ಸಿಹಿ ಮತ್ತು ಶಾಲು ನೀಡಿ ಅವರ ತಾಯಿ ಆಶೀರ್ವದಿಸಿದರು. ನಂತರ ಮೋದಿ ಅವರು ಅಹಮದಾಬಾದ್‌ನ ರಣಿಪ್‌ನಲ್ಲಿದ್ದ ಮತಗಟ್ಟೆಗೆ ತೆರೆದ ಜೀಪ್‌ನಲ್ಲಿ ಪಯಣಿಸಿದರು. ಆಗ ರಸ್ತೆಯ ಎರಡೂ ಬದಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಆ ಜನರತ್ತ ಮೋದಿ ಕೈಬೀಸಿದರು.

ಬಿಜೆಪಿಯ ಗಾಂಧೀನಗರ ಅಭ್ಯರ್ಥಿ ಅಮಿತ್ ಶಾ ಅವರು ಅದೇ ಮತಗಟ್ಟೆ ಬಳಿ ಮೋದಿಗಾಗಿ ಕಾದಿದ್ದರು. ಮೆರವಣಿಗೆ ಮೂಲಕ ಬಂದಿಳಿದ ಮೋದಿಯನ್ನು ಶಾ ಬರಮಾಡಿಕೊಂಡರು. ಅಲ್ಲೇ ಇದ್ದ ಶಾ ಅವರ ಮೊಮ್ಮಗಳನ್ನು ಎತ್ತಿಕೊಂಡು ಮುದ್ದಾಡಿದ ಮೋದಿ, ಜನರತ್ತ ಮತ್ತೆ ಕೈಬೀಸಿದರು. ನಂತರ ಮತಗಟ್ಟೆಯೊಳಗೆ ಪ್ರವೇಶಿಸಿ, ಮತ ಚಲಾಯಿಸಿದರು.

ಮತಗಟ್ಟೆಯಿಂದ ಹೊರಬಂದ ಮೋದಿ ತಮ್ಮ ಅಧಿಕೃತ ವಾಹನದಲ್ಲಿ ಸ್ವಲ್ಪದೂರ ಮೆರವಣಿಗೆ ನಡೆಸಿದರು. ಮತದಾನದ ಶಾಯಿಯನ್ನು ಜನರಿಗೆ ತೋರಿಸಿದರು. ಆನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ದೇಶದ ಭದ್ರತೆಗಾಗಿ ಮತ: ಶಾ

ದೇಶದ ಭದ್ರತೆಗಾಗಿ ನೀವೆಲ್ಲಾ ಮತ ಚಲಾಯಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

ತಾವೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವಗಾಂಧೀನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡುವಾಗ ಅವರು ಈ ಮಾತು ಹೇಳಿದರು.

‘ನಿಮ್ಮ ಒಂದು ಮತ ದೇಶದ ಭದ್ರತೆಯನ್ನು ಹೆಚ್ಚಿಸುತ್ತದೆ. ದೇಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ದೇಶದ ಭದ್ರತೆ ಮತ್ತು ಆರ್ಥಿಕತೆ ವೃದ್ಧಿಗಾಗಿ ನೀವೆಲ್ಲಾ ಮತ ಚಲಾಯಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT