ಮಿಷೆಲ್‌ನ ಉದ್ಯಮ ಪಾಲುದಾರಗೆ ಸಮನ್ಸ್

ಭಾನುವಾರ, ಮೇ 26, 2019
33 °C

ಮಿಷೆಲ್‌ನ ಉದ್ಯಮ ಪಾಲುದಾರಗೆ ಸಮನ್ಸ್

Published:
Updated:

ನವದೆಹಲಿ: ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಶಂಕಿತ ಮಧ್ಯವರ್ತಿ ಡೇವಿಡ್‌ ನೈಗೆಲ್‌ ಜಾನ್‌ ಸೈಮ್ಸ್‌ಗೆ ದೆಹಲಿಯ ಕೋರ್ಟ್ ಗುರುವಾರ ಹೊಸದಾಗಿ ಸಮನ್ಸ್‌ ಜಾರಿ ಮಾಡಿದೆ.

ಈತ ಪ್ರಕರಣದ ಶಂಕಿತ ಆರೋಪಿ ಕ್ರಿಶ್ಚಿಯನ್‌ ಮಿಷೆಲ್‌ನ ಉದ್ಯಮ ಪಾಲುದಾರನೆಂದು ಆರೋಪಿಸಲಾಗಿದೆ.

ವಿಶೇಷ ನ್ಯಾಯಾಧೀಶ ಅರವಿಂದ್‌ ಕುಮಾರ್‌ ಅವರು ಡೇವಿಡ್‌ಗೆ ಸಮನ್ಸ್‌ ಜಾರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಗ್ಲೋಬಲ್ ಸರ್ವಿಸಸ್‌ ಎಫ್‌ಝೆಡ್‌ಇ, ಗ್ಲೋಬಲ್ ಟ್ರೇಡರ್ಸ್‌ ಕಂಪನಿಗಳ ವಿರುದ್ಧ ಹಾಗೂ ‌ಡೇವಿಡ್‌ನ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಡೇವಿಡ್‌ ಹಾಗೂ ಮಿಷೆಲ್‌ ಈ ಎರಡು ಕಂಪನಿಗಳ ನಿರ್ದೇಶಕರಾಗಿದ್ದಾರೆ.

ದುಬೈನಿಂದ ಹಸ್ತಾಂತರಗೊಂಡ ಮೈಕಲ್‌ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !