ಕ್ರಿಶ್ಚಿಯನ್‌ ಮೈಕೆಲ್‌ ಜಾಮೀನಿಗೆ ಮೊರೆ

7
ಅಗಸ್ಟಾವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣ

ಕ್ರಿಶ್ಚಿಯನ್‌ ಮೈಕೆಲ್‌ ಜಾಮೀನಿಗೆ ಮೊರೆ

Published:
Updated:

ನವದೆಹಲಿ: ಅಗಸ್ಟಾವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣಕ್ಕೆ ಸಂಬಂಧಿಸಿ, ಬಂಧನಕ್ಕೊಳಗಾಗಿರುವ ಕ್ರಿಶ್ಚಿಯನ್‌ ಮೈಕಲ್‌ ಜಾಮೀನು ಕೋರಿ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ನಿಗದಿತ 60 ದಿನದೊಳಗೆ ನನ್ನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿಲ್ಲ. ಹಾಗಾಗಿ ಜಾಮೀನು ಮಂಜೂರು ಮಾಡಬೇಕೆಂದು ಮೈಕಲ್‌ ಅರ್ಜಿ ಸಲ್ಲಿಸಿದ್ದಾರೆ. 

ಫೆಬ್ರುವರಿ 12ರ ಒಳಗೆ ತನಿಖಾ ಸಂಸ್ಥೆಗಳು ಈ ಅರ್ಜಿಗೆ ಪ್ರತಿಕ್ರಿಯಿಸುವಂತೆ ವಿಶೇಷ ನ್ಯಾಯಾಧೀಶ ಅರವಿಂದ್‌ ಕುಮಾರ್‌ ತಿಳಿಸಿದ್ದಾರೆ.

ಕ್ರಿಶ್ಚಿಯನ್‌ ಅವರನ್ನು ಸಂಯುಕ್ತ ಅರಬ್‌ ಒಕ್ಕೂಟದಲ್ಲಿ ಬಂಧಿಸಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಕಳೆದ ಡಿಸೆಂಬರ್‌ 22ರಂದು ಇ.ಡಿ ಇವರನ್ನು ಬಂಧಿಸಿತ್ತು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !