ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡುವುದಿಲ್ಲ ಎಂದ ಚುನಾವಣಾ ಆಯೋಗ

ಭಾನುವಾರ, ಜೂನ್ 16, 2019
29 °C

ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡುವುದಿಲ್ಲ ಎಂದ ಚುನಾವಣಾ ಆಯೋಗ

Published:
Updated:

ನವದೆಹಲಿ: ಮತ ಎಣಿಕೆಯ ದಿನ ವಿವಿಪ್ಯಾಟ್‌ನ ಮತಚೀಟಿಗಳನ್ನು ಎಣಿಕೆ ಮಾಡಿದ ನಂತರವೇ ಮತಯಂತ್ರದಲ್ಲಿ ದಾಖಲಾಗಿರುವ ಮತಗಳನ್ನು ಬಹಿರಂಗ ಪಡಿಸಬೇಕು ಎಂದು ವಿರೋಧ ಪಕ್ಷಗಳ ನಾಯಕರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು. ಆದರೆ ಈ ಒತ್ತಾಯವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

 ಚುನಾವಣಾ ಆಯೋಗದ ಆಯುಕ್ತರಾದ ಅಶೋಕ್ ಲವಾಸಾ ಮತ್ತು ಸುಶೀಲ್ ಚಂದ್ರ ಅವರ ಜತೆ ಸಮಾಲೋಚನೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರಾ ಅವರು, ವಿವಿಪ್ಯಾಟ್‌ನ ಮತಚೀಟಿಗಳನ್ನು ಎಣಿಕೆ ಮಾಡಿದ ನಂತರವೇ ಮತಯಂತ್ರದಲ್ಲಿ ದಾಖಲಾಗಿರುವ ಮತಗಳನ್ನು ಬಹಿರಂಗ ಪಡಿಸಬೇಕು ಎಂಬ ವಿಪಕ್ಷ ನಾಯಕರ ಒತ್ತಾಯವನ್ನು ನಿರಾಕರಿಸಲಾಗಿದೆ ಎಂದಿದ್ದಾರೆ.

ಈ ಬಾರಿ ‘ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ಮತಗಟ್ಟೆಗಳನ್ನು ಆಯ್ಕೆ ಮಾಡಿ, ಅಲ್ಲಿಯ ವಿವಿಪ್ಯಾಟ್‌ ಮತಗಳನ್ನು ಇವಿಎಂಗಳಿಗೆ ತಾಳೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದು ಅದಕ್ಕೆ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮಂಗಳವಾರ ಆಯೋಗವನ್ನು ಭೇಟಿ ಮಾಡಿರುವ 22 ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ‘ಮೊದಲು ವಿವಿಪ್ಯಾಟ್‌ನ ಮತಚೀಟಿಗಳನ್ನು ಎಣಿಕೆ ಮಾಡಿ ಆನಂತರ ಅದನ್ನು ಇವಿಎಂಗಳಿಗೆ ತಾಳೆ ಮಾಡಬೇಕು. ಒಂದುಕಡೆ ವ್ಯತ್ಯಾಸ ಕಂಡುಬಂದರೂ ಆ ವಿಧಾನಸಭಾ ಕ್ಷೇತ್ರದ ಎಲ್ಲ ವಿವಿಪ್ಯಾಟ್‌ಗಳನ್ನೂ ತಾಳೆ ಮಾಡಬೇಕು’ ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡಿ: ವಿರೋಧಪಕ್ಷಗಳ ಪ್ರತಿನಿಧಿಗಳ ಒತ್ತಾಯ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 12

  Angry

Comments:

0 comments

Write the first review for this !