ಭ್ರಷ್ಟಾಚಾರ ತಡೆಗೆ ವೇತನ, ಭತ್ಯೆ ಹೆಚ್ಚಿಸಿ!

7

ಭ್ರಷ್ಟಾಚಾರ ತಡೆಗೆ ವೇತನ, ಭತ್ಯೆ ಹೆಚ್ಚಿಸಿ!

Published:
Updated:

ಲಖನೌ: ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ತೊಡಗದೆ ಇರುವಂತೆ ಮಾಡಲು ಉತ್ತರ ಪ್ರದೇಶದ ಬಿಜೆಪಿ ಸಂಸದರೊಬ್ಬರು ಸರ್ಕಾರಕ್ಕೆ ಸಲಹೆಯೊಂದನ್ನು ನೀಡಿದ್ದಾರೆ. 

ರಾಜಕಾರಣಿಗಳ ವೇತನ ಹಾಗೂ ಇತರ ಭತ್ಯೆಗಳನ್ನು ಸರ್ಕಾರ ಹೆಚ್ಚಿಸಬೇಕು, ಆಗ ಅವರು ‘ಕಳ್ಳತನ’ ಮಾಡುವುದಿಲ್ಲ ಎಂದು ಸಂಸದ ಹರೀಶ್ ದ್ವಿವೇದಿ ಹೇಳಿದ್ದಾರೆ. 

‘ಸಂಸದರ ವೇತನ ಪ್ರಾಥಮಿಕ ಶಾಲಾ ಶಿಕ್ಷಕರ ವೇತನಕ್ಕಿಂತಲೂ ಕಡಿಮೆ ಇದೆ. ಒಬ್ಬ ಸಂಸದನಿಗೆ ತನ್ನ ಕ್ಷೇತ್ರದ ಪರಿಣಾಮಕಾರಿ ಉಸ್ತುವಾರಿ ನೋಡಿಕೊಳ್ಳಲು ಕನಿಷ್ಠ 12 ಸಹಾಯಕರ ಅಗತ್ಯವಿದೆ. ಈ ವೆಚ್ಚ ಭರಿಸಲು ಈಗಿರುವ ವೇತನ ಸಾಲುವುದಿಲ್ಲ’ ಎಂದಿದ್ದಾರೆ.

‘ಜನ ನಮ್ಮ ಬಳಿ ಬಂದು ಶಿಫಾರಸು ಪತ್ರ ಕೇಳಿದಾಗ, ಪತ್ರ ಟೈಪ್‌ ಮಾಡಿಸಿಕೊಂಡು ಬನ್ನಿ ಎಂದು ಹೇಳಿದರೆ ಅವರಿಗೆ ಹೇಗನ್ನಿಸುತ್ತದೆ’ ಎಂದು ಯುವ ಸಮ್ಮೇಳನದಲ್ಲಿ ಅವರು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !