ಪ್ರೇಯಸಿಗೂ ಥ್ಯಾಂಕ್ಸ್ ಹೇಳಿದ ಯುಪಿಎಸ್‍ಸಿ ಪ್ರಥಮ ರ್‍ಯಾಂಕ್ ವಿಜೇತ ಕಟಾರಿಯಾ

ಶನಿವಾರ, ಏಪ್ರಿಲ್ 20, 2019
31 °C

ಪ್ರೇಯಸಿಗೂ ಥ್ಯಾಂಕ್ಸ್ ಹೇಳಿದ ಯುಪಿಎಸ್‍ಸಿ ಪ್ರಥಮ ರ್‍ಯಾಂಕ್ ವಿಜೇತ ಕಟಾರಿಯಾ

Published:
Updated:

ನವದೆಹಲಿ: ಯುಪಿಎಸ್‍ಸಿ 2018ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಐಐಟಿ ಬಾಂಬೆಯ ಬಿ.ಟೆಕ್ ಪದವೀಧರ ಕನಿಷ್ಕ್ ಕಟಾರಿಯಾ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. 

ಎಸ್.ಸಿ ಕೆಟಗರಿಗೆ ಸೇರಿದ ಕಟಾರಿಯಾ, ಗಣಿತವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಕಂಪ್ಯೂಟರ್ ಸಯನ್ಸ್ ವಿಷಯದಲ್ಲಿ ಬಿ.ಟೆಕ್ ಪದವೀಧರರಾಗಿರುವ  ಇವರು ಕೊರಿಯಾದಲ್ಲಿ ಸ್ಯಾಮ್‍ಸಂಗ್ ಕಂಪನಿಯಲ್ಲಿ ಕೆಲಸ ಮಾಡಿದ್ದು, ನಾಗರಿಕ ಸೇವಾ ಪರೀಕ್ಷೆ ತಯಾರಿಗಾಗಿ ಭಾರತಕ್ಕೆ ಮರಳಿದ್ದರು.

ಪರೀಕ್ಷಾ ಫಲಿತಾಂಶ ತಿಳಿದ ಕೂಡಲೇ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಪ್ರತಿಕ್ರಿಯಿಸಿದ ಕಟಾರಿಯಾ, ಇದು ಅಚ್ಚರಿಯ ಕ್ಷಣ. ನನಗೆ ಪ್ರಥಮ ರ್‍ಯಾಂಕ್ ಬರುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನನಗೆ ನೈತಿಕ ಬೆಂಬಲ ನೀಡಿದ  ನನ್ನ ಹೆತ್ತವರಿಗೆ, ಸಹೋದರಿಗೆ ಮತ್ತು ಪ್ರೇಯಸಿಗೆ ಧನ್ಯವಾದಗಳು. ನಾನೊಬ್ಬ ಉತ್ತಮ ಆಡಳಿತಾಧಿಕಾರಿ ಆಗಬೇಕೆಂದು ಜನರು ಬಯಸುತ್ತಾರೆ. ನನ್ನ ಉದ್ದೇಶವೂ ಅದೇ ಎಂದು ಹೇಳಿದ್ದಾರೆ.

ಕಟಾರಿಯಾ ಈ ಖುಷಿಯ ಗಳಿಗೆಯಲ್ಲಿ ಪ್ರೇಯಸಿಗೂ ಥ್ಯಾಂಕ್ಸ್ ಹೇಳಿರುವುದಕ್ಕೆ ಹಲವಾರು ಟ್ವೀಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಆತ ಪರೀಕ್ಷೆಗೆ ತಯಾರಿ ನಡೆಸುವಾಗ ತೊಂದರೆ ಕೊಡದೆ ಇರುವ ಗರ್ಲ್ ಫ್ರೆಂಡ್‍ಗೆ ಕೆಲವು ಟ್ವೀಟಿಗರು ಥ್ಯಾಂಕ್ಸ್ ಹೇಳಿದರೆ ಇನ್ನು ಕೆಲವರು ಕ್ಯಾಮೆರಾ ಮುಂದೆ ಈ ಮಾತನ್ನು ಹೇಳಿದ ಕಟಾರಿಯಾನನ್ನು ಶ್ಲಾಘಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 41

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !