ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಉತ್ತರಪತ್ರಿಕೆಯಲ್ಲಿ ₹100 ಇಡುವಂತೆ ಮಕ್ಕಳಿಗೆ ಸಲಹೆ ನೀಡಿದ ಕಾರ್ಪೊರೇಟರ್

Last Updated 20 ಫೆಬ್ರುವರಿ 2020, 12:58 IST
ಅಕ್ಷರ ಗಾತ್ರ

ಉತ್ತರ ಪ್ರದೇಶ (ಮವು) : ಇಲ್ಲಿನ ಖಾಸಗಿ ಕಾಲೇಜಿನ ಮ್ಯಾನೇಜರ್‌ ಒಬ್ಬರು ಪರೀಕ್ಷೆಯಲ್ಲಿ ಯಾವ ರೀತಿಯಲ್ಲಿ ನಕಲು ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ನೀಡಿರುವ ಸಲಹೆಯವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಪ್ರವೀಣ್‌ ಮಲ್ಲ ಎಂದು ಗುರುತಿಸಲಾಗಿದ್ದು ಇವರು ಮಧುಬನ್‌ನ ಕಾರ್ಪೋರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮವು ಜಿಲ್ಲೆಯಲ್ಲಿರುವಹರಿವಾಂಶ್‌ ಮೆಮೊರಿಯಲ್‌ ಕಾಲೇಜಿನ ಮಕ್ಕಳಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಆಥಿತಿಯಾಗಿ ಭಾಗವಹಿಸಿದ ಕಾರ್ಪೋರೇಟರ್ಮಕ್ಕಳಿಗೆ ಯಾವ ರೀತಿಯಲ್ಲಿ ನಕಲು ಮಾಡಬಹುದು ಎಂದು ವಿವರಿಸಿದ್ದು, ಉತ್ತರ ಪತ್ರಿಕೆಯಲ್ಲಿ ₹100 ನಗದು ಇರಿಸಿದಲ್ಲಿ ಪರೀಕ್ಷೆಯಲ್ಲಿ ಉತ್ತೀಣರಾಗಬಹುದು ಎಂದು ಅವರು ಹೇಳಿದ್ದಾರೆ.

‘ನೀವು ಪರೀಕ್ಷಯ ಕೊಠಡಿಯಲ್ಲಿ ಪ್ರಶ್ನೆಯ ಬಗ್ಗೆ ಪರಸ್ಪರ ಚರ್ಚಿಸಿ ಉತ್ತರ ಬರೆಯಬೇಕು, ಮಾತನಾಡುವುದನ್ನು ನಕಲು ಎಂದು ಪರಿಗಣಿಸಲು ಸಾಧ್ಯವಿಲ್ಲ. ಚೀಟಿಯನ್ನು ಬಳಸಬೇಡಿ ಹತ್ತಿರ ಇರುವವರೊಂದಿಗೆ ಕೇಳಿಕೊಳ್ಳಿ. ನೀವು ಚೀಟಿ ಬಳಸಿ ಸಿಕ್ಕಿ ಬಿದ್ದು ಶಿಕ್ಷರು ನಿಮಗೆ ಹೊಡೆದರೆ ಸಂಯಮದಿಂದ ವರ್ತಿಸಿ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ವಿಡಿಯೊದಲ್ಲಿ ನೀಡಿರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಮವು ಜಿಲ್ಲಾ ಶಿಕ್ಷಣಾಧಿಕಾರಿ ರಾಜೇಂದ್ರ ಪ್ರಸಾದ್‌ ಹೇಳಿದ್ದಾರೆ
ಐಟಿ ಕಾಯ್ದೆಯ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಹಿರಿಯ ಪೊಲೀಸ್‌ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT