ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ನಿಲ್ದಾಣಗಳಲ್ಲಿ ನೀರಿನ ಎಟಿಎಂ ಅಳವಡಿಕೆ

Last Updated 3 ಜುಲೈ 2019, 18:19 IST
ಅಕ್ಷರ ಗಾತ್ರ

ನವದೆಹಲಿ: ತನ್ನ ವ್ಯಾಪ್ತಿಯ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ನೀರಿನ ಎಟಿಎಂಗಳನ್ನು ಅಳವಡಿಸುವುದಾಗಿ ಕೊಂಕಣ ರೈಲ್ವೆ ನಿಗಮ ತಿಳಿಸಿದೆ.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲಿನ 59 ರೈಲ್ವೆ ನಿಲ್ದಾಣಗಳಲ್ಲಿ 61 ನೀರಿನ ಎಟಿಎಂಗಳನ್ನು ಅಳವಡಿಸಲಾಗುವುದು. ಇದರಿಂದ, ಪ್ರತಿನಿತ್ಯ 75 ಲಕ್ಷ ಪ್ರಯಾಣಿಕರಿಗೆ ಹಾಗೂ ನಿಲ್ದಾಣಗಳ ಸುತ್ತ ವಾಸಿಸುವ ಸ್ಥಳೀಯರಿಗೆ ಶುದ್ಧ ನೀರು ಲಭ್ಯವಾಗಲಿದೆ. ಅಳವಡಿಕೆ ಕಾರ್ಯವನ್ನು ದೆಹಲಿಯ ’ಜನಜಲ್‌’ ಕಂಪನಿಗೆ ಗುತ್ತಿಗೆ ನೀಡಲಾಗಿದೆ.

’ಐದು ತಿಂಗಳಲ್ಲಿ ಎಟಿಎಂಗಳನ್ನು ಅಳವಡಿಸಲಾಗುವುದು. ಆಧುನಿಕ, ಅತ್ಯುತ್ತಮ ತಂತ್ರಜ್ಞಾನದ ಮೂಲಕ ನೀರಿನ ಶುದ್ಧೀಕರಣ ಕಾರ್ಯ ಕೈಗೊಳ್ಳಲಾಗುವುದು. ಇದರಿಂದ, ಶೇಕಡ 5ಕ್ಕಿಂತ ಕಡಿಮೆಯಷ್ಟು ಮಾತ್ರ ನೀರು ವ್ಯರ್ಥವಾಗಲಿದೆ’ ಎಂದು ಜನಜಲ್‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪರಾಗ್‌ ಅಗರ್‌ವಾಲ್‌ ತಿಳಿಸಿದ್ದಾರೆ.

’ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಪ್ರತಿನಿತ್ಯ ಅಂದಾಜು 1 ಲಕ್ಷ ಲೀಟರ್‌ ನೀರು ಬಳಕೆಯಾಗಬಹುದು. ಈ ವ್ಯವಸ್ಥೆಯಿಂದ ಪ್ಲಾಸ್ಟಿಕ್‌ ಬಾಟಲ್‌ಗಳ ಬಳಕೆಯೂ ಕಡಿಮೆಯಾಗಲಿದೆ’ ಎಂದು ತಿಳಿಸಿದ್ದಾರೆ.

ಜನಜಲ್‌ ಕಂಪನಿಯು ಇದೇ ರೀತಿ ಮಹಾರಾಷ್ಟ್ರದಲ್ಲಿ ಕೇಂದ್ರೀಯ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ 101 ಎಟಿಎಂಗಳನ್ನು ಅಳವಡಿಸಿತ್ತು. ಜತೆಗೆ, ಮುಂಬೈ ಪೊಲೀಸ್‌ ಠಾಣೆಗಳಲ್ಲಿ 100 ಎಟಿಎಂಗಳನ್ನು ಅಳವಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT