ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹73 ಕೋಟಿ ಮೌಲ್ಯದ ನೀರು ಕಳವು! ಆರು ಮಂದಿ ವಿರುದ್ಧ ಪ್ರಕರಣ

Last Updated 17 ಅಕ್ಟೋಬರ್ 2019, 7:06 IST
ಅಕ್ಷರ ಗಾತ್ರ

ಮುಂಬೈ: ದಕ್ಷಿಣ ಮುಂಬೈಯ ಕಲ್ಬಾದೇವಿ ಬಳಿಯ ಎರಡು ಅಕ್ರಮ ಬಾವಿಗಳಿಂದ ಬರೋಬ್ಬರಿ ₹ 73.18 ಕೋಟಿ ಮೌಲ್ಯದ ನೀರನ್ನು ಕದ್ದಿರುವ ಆರೋಪದ ಮೇಲೆ ಆರು ಮಂದಿಯ ವಿರುದ್ಧಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.

ಪಾಂಡ್ಯಾ ಬಂಗಲೆಯ ಆವರಣದೊಳಗೆ ಪರವಾನಗಿ ಪಡೆಯದೇ ಬಾವಿಗಳನ್ನು ತೋಡಿ ನೀರನ್ನು ಕದಿಯಲಾಗುತ್ತಿದೆ ಎಂದು ಆರೋಪಿಸಿ ಸುರೇಶ್‌ ಕುಮಾರ್‌ ಧೋಕಾ ಎಂಬುವವರು ಆಝಾದ್‌ ಮೈದಾನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂಗಲೆಯ ಮಾಲೀಕ ತ್ರಿಪುರಪ್ರಸಾದ್‌ ಪಾಂಡ್ಯಾ ಅವರು ಅಕ್ರಮವಾಗಿ ಬಾವಿ ತೋಡಿ ಟ್ಯಾಂಕರ್‌ ಮೂಲಕ ನೀರು ಮಾರಾಟ ಮಾಡುತ್ತಿದ್ದರು. ಬಾವಿಗಳಿಗೆ ಪಂಪ್‌ ಅಳವಡಿಸಲು ಅಕ್ರಮವಾಗಿ ವಿದ್ಯುತ್‌ ಸಂಪರ್ಕವನ್ನೂ ಪಡೆದಿದ್ದರು ಎಂದು ಸುರೇಶ್‌ ಆರೋಪಿಸಿದ್ದಾರೆ.

2006ರಿಂದ 2017ರ ಅವಧಿಯಲ್ಲಿ ಈ ವಿದ್ಯುತ್‌ ಮೀಟರ್‌ಗಳಲ್ಲಿ ಉಲ್ಲೇಖವಾದ ಶುಲ್ಕವನ್ನು ಗಮನಿಸಿಯೇ ಅವರು ₹ 73.18 ಕೋಟಿ ಮೌಲ್ಯದ ನೀರು ಕಳವು ಮಾಡಿರುವುದನ್ನು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT