ವಿಮಾನಕ್ಕೆ ಡಿಕ್ಕಿ ಹೊಡೆದ ನೀರಿನ ಟ್ಯಾಂಕರ್‌: ತಪ್ಪಿದ ದುರಂತ

7

ವಿಮಾನಕ್ಕೆ ಡಿಕ್ಕಿ ಹೊಡೆದ ನೀರಿನ ಟ್ಯಾಂಕರ್‌: ತಪ್ಪಿದ ದುರಂತ

Published:
Updated:

ಕೊಲ್ಕತ್ತ: ಇಲ್ಲಿನ ವಿಮಾನ ನಿಲ್ದಾಣದಲ್ಲಿ 103 ಪ್ರಯಾಣಿಕರಿದ್ದ ಕತಾರ್‌ ಏರ್‌ವೇಸ್‌ ವಿಮಾನಕ್ಕೆ ಗುರುವಾರ ಬೆಳಗ್ಗಿನ ಜಾವ ನೀರಿನ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ.

ದೋಹಾಕ್ಕೆ ತೆರಳಲು ಸಿದ್ಧವಾಗಿದ್ದ ವಿಮಾನದ ಅಡಿ ಭಾಗಕ್ಕೆ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿ, ವಿಮಾನವನ್ನು ಪರಿಶೀಲಿಸಲಾಯಿತು. ಯಾರೂ ಗಾಯಗೊಂಡಿಲ್ಲ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಸಮೀಪದ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಅವರು ದೋಹಾಕ್ಕೆ ತೆರಳಲಿದ್ದಾರೆ’ ಎಂದಿದ್ದಾರೆ.

ಬ್ರೇಕ್‌ ವೈಫಲ್ಯದಿಂದಾಗಿ ಟ್ಯಾಂಕರ್‌ ವಿಮಾನಕ್ಕೆ ಡಿಕ್ಕಿ ಹೊಡೆದಿದೆ ಎಂದೂ ಹೇಳಿದ್ದಾರೆ.

ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !