ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಬೋಗಿಗೆ ಕ್ಷಿಪ್ರಗತಿಯಲ್ಲಿ ನೀರು ಭರ್ತಿ: ಪ್ರಯಾಣದ ಅವಧಿ ಉಳಿತಾಯ

20 ನಿಮಿಷದಿಂದ 5 ನಿಮಿಷಕ್ಕೆ ಇಳಿಕೆ
Last Updated 9 ಡಿಸೆಂಬರ್ 2018, 12:59 IST
ಅಕ್ಷರ ಗಾತ್ರ

ನವದೆಹಲಿ: ದೂರದ ಪ್ರದೇಶಗಳಿಗೆ ತೆರಳುವ ರೈಲುಗಳ ಬೋಗಿಗಳಿಗೆ ನೀರು ತುಂಬಿಸುವ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಇಲಾಖೆ ಮುಂದಾಗಿದೆ. ಇದರಿಂದ ನಿಲ್ದಾಣಗಳಲ್ಲಿ ಪ್ರತಿ ರೈಲಿಗೆ ನೀರು ತುಂಬಿಸುವ ಅವಧಿಯೂ ಈಗಿರುವ 20 ನಿಮಿಷದಿಂದ 5 ನಿಮಿಷಕ್ಕೆ ಇಳಿಕೆಯಾಗಲಿದೆ.

ನೀರು ತುಂಬಿಸುವ ವ್ಯವಸ್ಥೆ ಹೊಂದಿರುವ ದೇಶದ 142 ರೈಲು ನಿಲ್ದಾಣಗಳಲ್ಲಿ ಮುಂದಿನ ಮಾರ್ಚ್‌ ತಿಂಗಳಿನಿಂದ ಹೊಸ ವ್ಯವಸ್ಥೆ ಜಾರಿಯಾಗಲಿದ್ದು, ರೈಲ್ವೆ ಬೋರ್ಡ್ ಈಗಾಗಲೇ ₹300 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದೆ.

ಶೌಚಾಲಯ ಮತ್ತು ವಾಷ್‌ಬೇಸಿನ್‌ನ ಬಳಕೆಗೆ ದೂರದ ಪ್ರದೇಶಕ್ಕೆ ತೆರಳುವ ಪ್ರತಿ ರೈಲುಗಳಿಗೆ 300 ರಿಂದ 400 ಕಿ.ಮೀ ಅಂತರದಲ್ಲಿ ನೀರು ತುಂಬಿಸಲಾಗುತ್ತದೆ. ಟ್ಯಾಂಕ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿದ್ದರೂ, ಮುಂಜಾಗ್ರತ ಕ್ರಮವಾಗಿ ಭರ್ತಿ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ.

ಹೊಸ ವ್ಯವಸ್ಥೆ ಪ್ರಕಾರ, 24 ಬೋಗಿಗಳನ್ನು ಹೊಂದಿರುವ ರೈಲು ಬೋಗಿಗಳಿಗೆ 5 ನಿಮಿಷದಲ್ಲಿ ನೀರು ತುಂಬಿಸಬಹುದಾಗಿದ್ದು, ಏಕಕಾಲಕ್ಕೆ ಹಲವು ರೈಲುಗಳಿಗೂ ನೀರು ಪೂರೈಕೆ ಮಾಡಬಹುದಾಗಿದೆ.

’ಸದ್ಯ 4 ಇಂಚಿನ ಪೈಪ್‌ನಲ್ಲಿ ನೀರು ಭರ್ತಿ ಮಾಡಲಾಗುತ್ತಿದೆ. ಹೊಸ ವ್ಯವಸ್ಥೆಯಲ್ಲಿ 6 ಇಂಚಿನ ಪೈಪ್‌ನ ಜೊತೆಗೆ 40 ಅಶ್ವಶಕ್ತಿಪಂಪ್‌ಗಳನ್ನು ಬಳಸಲಾಗುತ್ತದೆ. ಕಂಪ್ಯೂಟರೀಕೃತ ವ್ಯವಸ್ಥೆ ಮೂಲಕ ಟ್ಯಾಂಕ್‌ಗೆ ನೀರು ಭರ್ತಿ ಮಾಡುವುದನ್ನು ನಿಗಾವಹಿಸಲಾಗುತ್ತದೆ‘ ರೈಲ್ವೆ ಬೋರ್ಡ್‌ನ ಸದಸ್ಯ ರಾಜೇಶ್‌ ಅಗರ್‌ವಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT