ನಿಗಾ ಕೇಂದ್ರಗಳಿಗೆ ಉತ್ತೇಜನ

7
ಮಕ್ಕಳ ದತ್ತು ಪ್ರಚಾರ: ಡಬ್ಲ್ಯುಸಿಡಿ ಯೋಜನೆ

ನಿಗಾ ಕೇಂದ್ರಗಳಿಗೆ ಉತ್ತೇಜನ

Published:
Updated:

ನವದೆಹಲಿ: ಮಕ್ಕಳ ನಿಗಾ ಕೇಂದ್ರಗಳು ತಮ್ಮಲ್ಲಿನ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಇದೆ ಎಂದು ಪ್ರಚಾರ ಕೈಗೊಂಡಲ್ಲಿ, ಅಂತಹ ಕೇಂದ್ರಗಳಿಗೆ ಆರ್ಥಿಕ ಉತ್ತೇಜನ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ. 

ಬಹುಪಾಲು ಮಕ್ಕಳ ನಿಗಾ ಕೇಂದ್ರಗಳು ಬಾಲನ್ಯಾಯ ಕಾಯ್ದೆ 2015ರ ಅಡಿಯಲ್ಲಿ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದಲ್ಲಿ (ಸಿಎಆರ್‌ಎ) ನೋಂದಾಯಿಸಿಕೊಂಡಿಲ್ಲ. ಇದರಿಂದಾಗಿ, ದೇಶದಲ್ಲಿ ದತ್ತು ಪಡೆಯಲು ಲಭ್ಯವಿರುವ ಮಕ್ಕಳ ನಿಖರ ಮಾಹಿತಿ ತಿಳಿಯುವುದಿಲ್ಲ. ಈ ನಿಟ್ಟಿನಲ್ಲಿ ಸಚಿವಾಲಯ ಇಂತಹ ಯೋಜನೆ ರೂಪಿಸಲು ಮುಂದಾಗಿದೆ. 

ಪ್ರಸ್ತುತ ಮಕ್ಕಳ ನಿಗಾ ಕೇಂದ್ರಗಳಲ್ಲಿನ ಮಕ್ಕಳ ನಿರ್ವಹಣೆಗಾಗಿ ತಲಾ ₹2,000 ನೀಡಲಾಗುತ್ತಿದೆ. ಮಕ್ಕಳನ್ನು ದತ್ತು ನೀಡಿದರೆ ತಮ್ಮ ಆದಾಯ ಕಡಿಮೆ ಆಗಬಹುದು ಎನ್ನುವ ಕಾರಣದಿಂದ ಕೇಂದ್ರಗಳು ಮಕ್ಕಳನ್ನು ದತ್ತು ನೀಡಲು ಇಚ್ಛಿಸುವುದಿಲ್ಲ ಎಂದು ಸಚಿವಾಲಯದ ಕಾರ್ಯದರ್ಶಿ ರಾಕೇಶ್ ಶ್ರೀವಾಸ್ತವ ಹೇಳಿದ್ದಾರೆ.

ನೋಂದಣಿಗೆ ನಿರ್ದೇಶನ: ಈಚೆಗೆ ಮಿಷನರಿಯೊಂದರಲ್ಲಿ ಮಕ್ಕಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ವರದಿಯಾಗಿತ್ತು. ಇದರ ಬೆನ್ನಲ್ಲೇ, ಜಾರ್ಖಂಡ್‌ನಲ್ಲಿನ ಈ ಮಿಷನರಿಯ ಶಾಖೆಯೊಂದರಿಂದ ಕ್ರೈಸ್ತ ಸನ್ಯಾಸಿನಿ ಹಾಗೂ ಮಹಿಳಾ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿತ್ತು.

ಇದಾದ ನಂತರದಲ್ಲಿ ಕೇಂದ್ರಗಳು ಸಿಎಆರ್‌ಎ ಅಡಿ ನೋಂದಾಯಿಸಿಕೊಳ್ಳಬೇಕೆಂದು ಸಚಿವಾಲಯ ಕಳೆದ ತಿಂಗಳು ಮತ್ತೆ ನಿರ್ದೇಶನ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !