ಲೈಂಗಿಕ ದೌರ್ಜನ್ಯ ಪ್ರಕರಣ: ಏರ್‌ ಇಂಡಿಯಾ ಮುಖ್ಯಸ್ಥ ಖರೋಲಾಗೆ ನೋಟಿಸ್‌

7

ಲೈಂಗಿಕ ದೌರ್ಜನ್ಯ ಪ್ರಕರಣ: ಏರ್‌ ಇಂಡಿಯಾ ಮುಖ್ಯಸ್ಥ ಖರೋಲಾಗೆ ನೋಟಿಸ್‌

Published:
Updated:

ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣವೊಂದರ ತನಿಖೆ ವಿಳಂಬ ಸಂಬಂಧ ಏರ್ ಇಂಡಿಯಾ ಮುಖ್ಯಸ್ಥ ಪ್ರದೀಪ್‌ ಸಿಂಗ್ ಖರೋಲಾ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೋಟಿಸ್‌ ಜಾರಿ ಮಾಡಿದೆ. ಮುಂದಿನ ವಾರದ ಒಳಗೆ ವಿವರ ನೀಡುವಂತೆ ಸೂಚಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಯನ್ನು ಪೂರ್ಣಗೊಳಿಸುವಂತೆ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಏರ್ ಇಂಡಿಯಾದ ಆಂತರಿಕ ದೂರುಗಳ ಸಮಿತಿಗೆ ಜೂನ್‌ನಲ್ಲಿ ಪತ್ರ ಬರೆದಿದ್ದರು.

ಹಿರಿಯ ಅಧಿಕಾರಿಯೊಬ್ಬರು ತಮ್ಮ ಮೇಲೆ ಆರು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಗಗನಸಖಿಯೊಬ್ಬರು  ದೂರು ದಾಖಲಿಸಿದ್ದರು. ಈವರೆಗೆ ಇದರ ತನಿಖೆ ಪೂರ್ಣ‌ಗೊಳ್ಳದಿರುವ ಬಗ್ಗೆ ಆಗಸ್ಟ್‌ 23ರೊಳಗೆ ವಿವರ ನೀಡುವಂತೆ ಖರೋಲಾ ಅವರಿಗೆ ತಿಳಿಸಲಾಗಿದೆ.

ಈ ಪ್ರಕರಣವನ್ನು ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರ ಗಮನಕ್ಕೂ ತಂದಿರುವುದಾಗಿ ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

‘ಹಿರಿಯ ಅಧಿಕಾರಿ ನನ್ನ ಸ್ಥಾನ ಮತ್ತು ಹಕ್ಕಿಗೆ ಬೆಲೆ ಕೊಡದೆ ನಿಂದಿಸಿದ್ದಾರೆ. ನನ್ನ ಎದುರಿನಲ್ಲಿ ಬೇರೆ ಮಹಿಳೆಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ನನ್ನೊಂದಿಗೆ ಲೈಂಗಿಕ ಚಟುವಟಿಕೆಯ ಮಾತುಗಳನ್ನು ಆಡಿದ್ದಾರೆ. ಕಚೇರಿ ಆವರಣದಲ್ಲಿ ನನ್ನ ಉಪಸ್ಥಿತಿಯಲ್ಲಿ ಇತರ ಮಹಿಳೆಯ ಎದುರು ಇದೇ ಮಾತುಗಳನ್ನು ಆಡಿದ್ದಾರೆ’ ಎಂದು ಆರೋಪಿಸಿ ಗಗನಸಖಿ ಕಳೆದ ಸೆಪ್ಟೆಂಬರ್‌ನಲ್ಲಿ ಏರ್ ಇಂಡಿಯಾಕ್ಕೆ ದೂರು ನೀಡಿದ್ದರು.

ಆನಂತರ ಸಿಎಂಡಿ ಖರೋಲಾ ಅವರಿಗೂ ದೂರು ಸಲ್ಲಿಸಿದ್ದರು.‌

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !