ನಾವು ಬಾಂಗ್ಲಾ ವಿರೋಧಿಯಲ್ಲ; ಮಮತಾ ವಿರೋಧಿ: ಅಮಿತ್ ಶಾ

7

ನಾವು ಬಾಂಗ್ಲಾ ವಿರೋಧಿಯಲ್ಲ; ಮಮತಾ ವಿರೋಧಿ: ಅಮಿತ್ ಶಾ

Published:
Updated:

ಕೊಲ್ಕತ್ತ: ನಾವು ಬಾಂಗ್ಲಾ ವಿರೋಧಿಯಲ್ಲ. ನಾವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಡು ವಿರೋಧಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. 

ಭಾರತೀಯ ಜನತಾ ಯುವ ಮೋರ್ಚಾ ಕೊಲ್ಕತ್ತದ ಮಾಯೋ ರಸ್ತೆಯಲ್ಲಿ ಆಯೋಜಿಸಿದ್ದ ‘ಯುವ ಸ್ವಾಭಿಮಾನ ಸಮಾವೇಶ’ದಲ್ಲಿ ಅವರು ಮಾತನಾಡಿದರು. 

ಬಿಜೆಪಿಯು ಪಶ್ಚಿಮ ಬಂಗಾಳದ ಪ್ರತಿಯೊಂದು ಜಿಲ್ಲೆಯಲ್ಲೂ ಸಮಾವೇಶ ಹಮ್ಮಿಕೊಳ್ಳುವ  ಮೂಲಕ ಮಮತಾ ಅವರ ಆಡಳಿತವನ್ನು ಬೇರು ಸಹಿತ ಕಿತ್ತೊಗೆಯಲಿದೆ ಎಂದು ಕಿಡಿಕಾರಿದರು. 

ಬಿಜೆಪಿಯು ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸುವ ಬಗ್ಗೆ ಭರವಸೆ ನೀಡುತ್ತದೆ. ನಮ್ಮ ಈ ನಡೆಯನ್ನು ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮತಗಳಿಗಿಂತ ಮೊದಲು ದೇಶ ಮುಖ್ಯ. ಯಾವುದೇ ಪಕ್ಷದಿಂದ ವಿರೋಧ ಎದುರಾದರೂ ಎನ್‌ಆರ್‌ಸಿ ಪ್ರಕ್ರಿಯೆ ನಿಲ್ಲಿಸುವುದಿಲ್ಲ ಎಂದರು. 

ಬಾಂಗ್ಲಾ ಅಕ್ರಮ ನುಸುಳುಕೋರರನ್ನು ಮಮತಾ ಅವರು ಯಾಕೆ ಪೋಷಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ ಅಮಿತ್ ಶಾ, ಈ ಬಗ್ಗೆ ರಾಹುಲ್ ಗಾಂಧಿ ಅವರು ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಯಾಕೆಂದರೆ ಕಾಂಗ್ರೆಸ್ ಕೂಡ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯೋಚಿಸಿದೆ ಎಂದು ದೂರಿದರು. 

’ಬಂಗಾಳಿ ವಿರೋಧಿ’ ಎಂದು ಶಾ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸಿದ  ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ, ಬಿಜೆಪಿ ಪಕ್ಷದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹುಟ್ಟೂರು ಬಂಗಾಳ. ಹೀಗಿರುವಾಗ ನಾನು ಬಂಗಾಳಿ ವಿರೋಧಿಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !