ನಾವು ಯಾರಿಗೂ ತೊಂದರೆ ಕೊಡಲ್ಲ, ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ:ರಾಜನಾಥ್ ಸಿಂಗ್

ಭಾನುವಾರ, ಏಪ್ರಿಲ್ 21, 2019
25 °C

ನಾವು ಯಾರಿಗೂ ತೊಂದರೆ ಕೊಡಲ್ಲ, ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ:ರಾಜನಾಥ್ ಸಿಂಗ್

Published:
Updated:

ನವದೆಹಲಿ: ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಕೆಲವು ರಾಜಕೀಯ ನಾಯಕರು ಹೇಳುತ್ತಿರುವುದು ಅವರ ಹತಾಶೆಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್.

ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಂಗ್, ದೇಶಕ್ಕೆ ಇಬ್ಬರು ಪ್ರಧಾನಿ ಬೇಕು ಎಂದು ಹೇಳುವುದಾದರೆ ಪರಿಚ್ಛೇದ 370 ಮತ್ತು 35Aಯನ್ನು ರದ್ದುಗೊಳಿಸುವುದು ಬಿಟ್ಟರೆ ನಮ್ಮಲ್ಲಿ ಬೇರೆ ಯಾವ ಆಯ್ಕೆ ಉಳಿದಿದೆ? ಎಂದು ಪ್ರಶ್ನಿಸಿದ್ದಾರೆ.
ಪರಿಚ್ಛೇದ 370 ಮತ್ತು  35A ರದ್ದುಗೊಳಿಸುವ ಬಿಜೆಪಿ ನಿರ್ಧಾರದ ವಿರುದ್ಧ  ನ್ಯಾಷನಲ್ ಕಾನ್ಪರೆನ್ಸ್‌ ನೇತಾರ ಒಮರ್ ಅಬ್ದುಲ್ಲ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ  ಮೆಹಬೂಬ ಮುಫ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಂಗ್,  ಪರಿಚ್ಛೇದ 370 ಮತ್ತು  35A ಬಗ್ಗೆ ಬಿಜೆಪಿಯ ನಿಲುವು ಸ್ಪಷ್ಟವಾಗಿದೆ ಎಂದಿದ್ದಾರೆ.

ಸಂವಿಧಾನದ ಪರಿಚ್ಛೇದ 370 ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿದ್ದಾಗಿದ್ದು, ಸಂವಿಧಾನದ ಪರಿಚ್ಛೇದ 35ಎ ಜಮ್ಮು ಮತ್ತು ಕಾಶ್ಮೀರದ ಶಾಸನಸಭೆಗೆ ರಾಜ್ಯದ ಕಾಯಂ ನಿವಾಸಿಗಳನ್ನು ವ್ಯಾಖ್ಯಾನಿಸಲು ಮತ್ತು ಅವರಿಗೆ ವಿಶೇಷ ಹಕ್ಕು, ಸೌಲಭ್ಯಗಳನ್ನು ನೀಡಲು ಅವಕಾಶ ಒದಗಿಸಿದೆ.

ಈ ಹಿಂದೆ ಮಹಾರಾಷ್ಟ್ರದ ವಿದರ್ಭಾದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಸಿಂಗ್ 197ರಲ್ಲಿ ಇಂದಿರಾಗಾಂಧಿ ಬಾಂಗ್ಲಾದೇಶ ರಚಿಸಿದ್ದನ್ನು ಹೊಗಳುವಾಗ, ಪುಲ್ವಾಮಾ ಭಯೋತ್ಪಾದನಾ ಕೃತ್ಯಕ್ಕೆ ಪ್ರತೀಕಾರ ಮಾಡಿದ ಮೋದಿಗೂ ಶ್ಲಾಘನೆ ಸಲ್ಲುತ್ತದೆ .

ಬಾಲಾಕೋಟ್ ವಾಯುದಾಳಿ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಧೀರರು ಮೃತದೇಹದ ಸಂಖ್ಯೆ ಎಣಿಸುವುದಿಲ್ಲ, ಈ ರೀತಿ ಎಣಿಕೆ ಮಾಡುವುದು ರಣಹದ್ದುಗಳು ಮಾತ್ರ. ಪುಲ್ವಾಮಾ ದಾಳಿ ನಡೆದು 13 ದಿನಗಳಲ್ಲಿಯೇ ನಾವು ಪ್ರತಿದಾಳಿ ಮಾಡಿದೆವು. ನಾವು ಯಾರಿಗೂ ತೊಂದರೆ ನೀಡುವುದಿಲ್ಲ ಆದರೆ ಯಾರಾದರೂ ನಮಗೆ ತೊಂದರೆ ನೀಡಿದರೆ ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !