ಶನಿವಾರ, ಜನವರಿ 25, 2020
28 °C

ದೇಶವಾಗಿ ನಾವಿಂದು ಸೋತಿದ್ದೇವೆ: ಉನ್ನಾವ್‌ ಪ್ರಕರಣಕ್ಕೆ ಗೌತಮ್‌ ಗಂಭೀರ್‌ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಉನ್ನಾವ್‌ ಅತ್ಯಾಚಾರ ಪ್ರಕರಣದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್‌ ಅವರು, ‘ದೇಶವಾಗಿ ನಾವಿಂದು ಸೋತಿದ್ದೇವೆ,’ ಎಂದಿದ್ದಾರೆ. 

‘23 ವರ್ಷದ ಮಹಿಳೆ ಮೇಲೆ ಮೊದಲು ಅತ್ಯಾಚಾರ ಎಸಗಿ ಆ ನಂತರ ಬೆಂಕಿ ಹಚ್ಚಿ ಕೊಂದಿದ್ದಾರೆ. ಅವಳನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿರಾಶಾದಾಯಕ  ಸಂಗತಿ ಎಂದರೆ, ಇಂದು ನಾವು ದೇಶವಾಗಿ ಸೋತಿದ್ದೇವೆ’ ಎಂದು ಖೇದ ವ್ಯಕ್ತಪಡಿಸಿದ್ದಾರೆ. 

‘ಈ ಘಟನೆಗೆ ಎಲ್ಲರೂ ಹೊಣೆಯಾಗಿದ್ದೇವೆ. ಇದನ್ನು ರಾಜಕೀಯಗೊಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ದೇಶವು ಗಂಡು ಮತ್ತು ಹೆಣ್ಣು ಇಬ್ಬರಿಗೂ ಸೇರಿದ್ದು. ಸೂರ್ಯ ಮುಳುಗಿದ ನಂತರ ಮಹಿಳೆ ಭಯಪಡುವ ವಾತಾವರಣ ಕೊನೆಯಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಮನಸ್ಥಿತಿ ಬದಲಾಗಬೇಕು,’ ಎಂದಿದ್ದಾರೆ. 
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು