ಬುದ್ಧ, ಯುದ್ಧ ಎರಡೂ ಬೇಕು: ಪಾಸ್ವಾನ್‌

ಸೋಮವಾರ, ಮಾರ್ಚ್ 25, 2019
31 °C
ವಾಯುದಾಳಿ: ರಾಜಕೀಯ ನೇತಾರರ ವಾಗ್ದಾಳಿ

ಬುದ್ಧ, ಯುದ್ಧ ಎರಡೂ ಬೇಕು: ಪಾಸ್ವಾನ್‌

Published:
Updated:

ಪಟ್ನಾ: ‘ಕೇಂದ್ರ ಸರ್ಕಾರವು ಗುಂಡು ಹಾರಾಟದ ಯುದ್ಧದಲ್ಲಿ (ಬ್ಯಾಟಲ್‌ ಆಫ್‌ ಬುಲೆಟ್‌) ಗೆದ್ದಿದೆ, ಈಗ ಮತ ಸಮರದಲ್ಲಿ (ಬ್ಯಾಟಲ್‌ ಆಫ್‌ ಬ್ಯಾಲೆಟ್‌) ಎನ್‌ಡಿಎ ಗೆಲ್ಲಬೇಕಿದೆ. ನಮಗೆ ಬುದ್ಧ (ಶಾಂತಿ) ಬೇಕು, ಅಗತ್ಯ ಬಿದ್ದರೆ ನಾವು ಯುದ್ಧಕ್ಕೂ ಸಿದ್ಧ. ನಮಗೆ ಬುದ್ಧ ಮತ್ತು ಯುದ್ಧ ಎರಡೂ ಬೇಕಿದೆ’ ಎಂದು ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ. 

ಬುದ್ಧ ಮತ್ತು ಯುದ್ಧ ಎರಡನ್ನೂ ನಮ್ಮ ಪ್ರಧಾನಿ ಇರಿಸಿಕೊಂಡಿದ್ದಾರೆ ಎಂದು ಹೇಳಿದ ಪಾಸ್ವಾನ್‌ ಅವರು, ಪುಲ್ವಾಮಾ ದಾಳಿಯ ನಂತರದ ಪರಿಸ್ಥಿತಿಯನ್ನು ಮೋದಿ ಅವರು ನಿಭಾಯಿಸಿದ ರೀತಿಯನ್ನು ಹೊಗಳಿದರು. 

ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ, 400 ಲೋಕಸಭಾ ಕ್ಷೇತ್ರಗಳನ್ನು ಎನ್‌ಡಿಎ ಗೆಲ್ಲಲಿದೆ. ಬಿಹಾರದ ಎಲ್ಲ 40 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಪಾಸ್ವಾನ್‌ ವಿಶ್ವಾಸ ವ್ಯಕ್ತಪಡಿಸಿದರು.  

***

ಜನರು ನಿಮ್ಮನ್ನು (ಮೋದಿ) ಅಭಿನಂದಿಸಲು ಬಯಸಿದ್ದಾರೆ. ನಿಮ್ಮ ಎದೆಯ ಗಾತ್ರ 56 ಇಂಚು ಅಲ್ಲ, ಅದು 156 ಇಂಚು ಎಂದು ಜನರು ಹೇಳುತ್ತಿದ್ದಾರೆ

-ರಾಮ್‌ ವಿಲಾಸ್‌ ಪಾಸ್ವಾನ್‌, ಕೇಂದ್ರ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !