ಎಚ್‌.ಡಿ.ದೇವೇಗೌಡ ಭೇಟಿಯಾದ ಮಮತಾ ಬ್ಯಾನರ್ಜಿ

7
ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ

ಎಚ್‌.ಡಿ.ದೇವೇಗೌಡ ಭೇಟಿಯಾದ ಮಮತಾ ಬ್ಯಾನರ್ಜಿ

Published:
Updated:

ನವದೆಹಲಿ: ಮಾಜಿ‌ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ದೆಹಲಿ ಕರ್ನಾಟಕ ಭವನದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಭೇಟಿಯಾಗಿದ್ದರು.  

ಸೌಹಾರ್ದ ಭೇಟಿಯ ವೇಳೆ ದೇವೇಗೌಡರ ಆರೋಗ್ಯ ಕುರಿತು‌ ವಿಚಾರಿಸಿದೆ. ಜತೆಗೆ, ರಾಜಕೀಯ ವಿಷಯಗಳ ಕುರಿತು ಚರ್ಚಿಸಿದ್ದಾಗಿ ಮಮತಾ ಬ್ಯಾನರ್ಜಿ ತಿಳಿಸಿದರು. 

ಮಹಾಮೈತ್ರಿಯ ಕುರಿತು ಅರ್ಧ ಗಂಟೆ ಕಾಲ ಚರ್ಚೆ‌ ನಡೆಸಲಾಯಿತು ಎಂದು ಹೇಳಿದರು. 

ಸಭೆಯಲ್ಲಿ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ದಾನಿಶ್ ಅಲಿ, ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಭಾಗವಹಿಸಿದ್ದರು. 

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ದೇಶದಾದ್ಯಂತ ಮೈತ್ರಿ ಮಾಡಿಕೊಳ್ಳುವ‌ ಕುರಿತು ಚರ್ಚೆ‌ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಲು ದೇವೇಗೌಡ ನಿರಾಕರಿಸಿದರು. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !