ಬುಧವಾರ, ನವೆಂಬರ್ 20, 2019
20 °C

ಪಶ್ಚಿಮ ಬಂಗಾಳದಲ್ಲಿ ಗುಂಪು ಹಲ್ಲೆ: ಓರ್ವ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

Published:
Updated:
Stop lynching

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಎರಡು ಜಿಲ್ಲೆಗಳಲ್ಲಿ ಭಾನುವಾರ ಬೆಳಗ್ಗೆ ನಡೆದ ಎರಡು ಪ್ರತ್ಯೇಕ ಗುಂಪು ಹಲ್ಲೆ ಪ್ರಕರಣದಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, ಇಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ. 

ಇಲ್ಲಿನ ಹೌರಾ ಜಿಲ್ಲೆಯ  ಸಲ್ಖಿಯಾ ಪ್ರದೇಶದಲ್ಲಿ ಅಲ್ಲಿನ ಸ್ಥಳೀಯರು  30ರ ಹರೆಯದ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಥಳಿಸಿದ ಪರಿಣಾಮ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.  ಸಾವಿಗೀಡಾದ ಯುವಕ ಕಳ್ಳ ಎಂದು ಶಂಕಿಸಲಾಗಿತ್ತು.ತಪ್ಪಿತಸ್ಥರನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಹೌರಾ ಸಿಟಿ ಪೊಲೀಸ್  ಡಿಸಿಪಿ (ಉತ್ತರ) ವೈ. ರಘುಬಂಶಿ ಹೇಳಿದ್ದಾರೆ.

ಇದನ್ನೂ ಓದಿ: ಗುಂಪು ಗಲಭೆ ತಡೆಗೆ ಮುಂದಾದ ಪೊಲೀಸರ ಮೇಲೆಯೇ ಹಲ್ಲೆ 

ಇನ್ನೊಂದು ಪ್ರಕರಣರಲ್ಲಿ ಇಲ್ಲಿನ ಮಾಲ್ಡಾ ಜಿಲ್ಲೆಯ ಇಂಗ್ಲಿಷ್ ಬಜಾರ್‌ನಲ್ಲಿ ಇಬ್ಬರು ವ್ಯಕ್ತಿಗಳಿಗೆ ಜನರ ಗುಂಪೊಂದು ಥಳಿಸಿದೆ. ಕಳ್ಳತನದ ಶಂಕೆಯಿಂದ ಈ ವ್ಯಕ್ತಿಗಳ  ಹಲ್ಲೆ ನಡೆದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪಿರೋಜ್‌ಪುರ್  ಮಹಿಳಾ ಕಾಲೇಜು ಬಳಿ ಅಡ್ಡಾಡುತ್ತಿದ್ದಾರ ಹೈಯುಲ್ ಶೇಖ್ (22) ಮತ್ತು ಸಲ್ಮಾನ್ ಶೇಖ್ (20) ಎಂಬವರನ್ನು ಅಲ್ಲಿನ ಸ್ಥಳೀಯರು ಹಿಡಿದು ಥಳಿಸಿದ್ದರು. ಈ ಇಬ್ಬರು ಯುವಕರು ಕಾಲಿಯಾಚಕ್ ಪ್ರದೇಶದವರು ಎಂದು ತಿಳಿದ ಕೂಡಲೇ ಜನರ ಗುಂಪು ಮತ್ತಷ್ಟು ಥಳಿಸಿದೆ.  ಅಪರಾಧಗಳಿಗೆ ಕುಖ್ಯಾತಿ ಪಡೆದ ಪ್ರದೇಶವಾಗಿದೆ ಕಾಲಿಯಾಚಕ್. 

ಇದನ್ನೂ ಓದಿ: ಗುಂಪು ಹಲ್ಲೆ ಖಂಡಿಸಿ ಪ್ರಧಾನಿಗೆ ಪತ್ರ ಬರೆದ ಸೆಲೆಬ್ರಿಟಿಗಳ ವಿರುದ್ಧ ಎಫ್‌ಐಆರ್

ಇಂಗ್ಲಿಷ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಲ್ಲೆಗೊಳಗಾದ ಯುವಕರನ್ನು ರಕ್ಷಿಸಿದ್ದು ಮಾಲ್ಡಾ  ವೈದ್ಯಕೀಯ ಕಾಲೇಜು  ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೈಯಲ್ ಮತ್ತು ನಾನು ಕಾಲೇಜು ಬಳಿ ವಾಸವಿರುವ ಗೆಳೆಯನೊಬ್ಬನನ್ನು ಭೇಟಿ ಮಾಡಲು ಹೋಗಿದ್ದೆವು. ಅಲ್ಲಿನ ಸ್ಥಳೀಯರು ನಾವು ಕಳ್ಳರೆಂದು ಶಂಕಿಸಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಅಲ್ಲಿಗೆ ಬರದೇ ಇರುತ್ತಿದ್ದರೆ ಆ ಗುಂಪು ನಮ್ಮನ್ನು ಕೊಂದು ಬಿಡುತ್ತಿತ್ತು ಎದು ಸಲಾಂ ಶೇಖ್ ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ದೇಶಕ್ಕೆ ಅಪಖ್ಯಾತಿ ತರಲು ಗುಂಪು ಹಲ್ಲೆ ಪ್ರಕರಣಗಳನ್ನು ಬಳಸಬೇಡಿ: ಮೋಹನ್ ಭಾಗವತ್

ಪ್ರತಿಕ್ರಿಯಿಸಿ (+)