ಬಿಜೆಪಿ ವಿರುದ್ಧ ರ‍್ಯಾಲಿ, ಕೇರಳ ಸಿಎಂಗೆ ಆಹ್ವಾನ ನೀಡಿದ ಮಮತಾ ಬ್ಯಾನರ್ಜಿ

6

ಬಿಜೆಪಿ ವಿರುದ್ಧ ರ‍್ಯಾಲಿ, ಕೇರಳ ಸಿಎಂಗೆ ಆಹ್ವಾನ ನೀಡಿದ ಮಮತಾ ಬ್ಯಾನರ್ಜಿ

Published:
Updated:

ಕೋಲ್ಕತ್ತ: 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರೋಧಿಸುವಂತಹ ಪ್ರತಿಪಕ್ಷಗಳ ಒಕ್ಕೂಟ ರಂಗ (ಫೆಡರಲ್ ಫ್ರಂಟ್) ಸ್ಥಾಪನೆಗಾಗಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)‍ಪಕ್ಷದ ಮುಖ್ಯಸ್ಥೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ.

ಜ.19ರಂದು ಕೋಲ್ಕತ್ತದಲ್ಲಿ ನಡೆಯಲಿರುವ ಪಕ್ಷದ ಸಮಾವೇಶಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ಇತರೆ ರಾಜಕೀಯ ಮುಖಂಡರನ್ನು ಆಹ್ವಾನಿಸಿರುವುದಾಗಿ ಅವರು ತಿಳಿಸಿದ್ದಾರೆ.

ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಸಿಪಿಐ(ಎಂ) ಸೇರಿದಂತೆ ಇತರೆ ಪಕ್ಷಗಳ ಶಕ್ತಿಪ್ರದರ್ಶನಕ್ಕೆ ಇದು ವೇದಿಕೆಯಾಗಲಿದೆ ಎಂದು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಸಿಪಿಐ(ಎಂ) ನಾಯಕರು ನನ್ನ ವಿರುದ್ಧ ಇನ್ನೂ ಪಿತೂರಿ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಎಲ್ಲ ಎಡಪಂಥೀಯರು ಕೆಟ್ಟವರಲ್ಲ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ ಜ.19ರಂದು ನಡೆಯಲಿರುವ ರ‍್ಯಾಲಿಯಲ್ಲಿ ಭಾಗವಹಿಸುವಂತೆ ಕೇರಳ ಮುಖ್ಯಮಂತ್ರಿಗೆ ಆಹ್ವಾನಿಸಿದ್ದೇನೆ. ಇದೇ ವೇಳೆ ಸಿಪಿಐ, ಆರ್‌ಎಸ್‌ಪಿ, ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌ನಂತಹ ಇತರೆ ಎಡಪಂಥೀಯ ಪಕ್ಷಗಳ ಮುಖಂಡರನ್ನು ಆಮಂತ್ರಿಸುತ್ತೇನೆ’ ಎಂದು ಹೇಳಿದರು.

ಬಿಜೆಪಿ ವಿರೋಧಿಸುವ ಪ್ರಮುಖ ಎಲ್ಲ ಪಕ್ಷಗಳ ನಾಯಕರಿಗೆ ಈಗಾಗಲೇ ಆಮಂತ್ರಣ ಕಳುಹಿಸಲಾಗಿದೆ ಎಂದು ಹೇಳಿದರು.

ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮುಖಂಡ ಚಂದ್ರಬಾಬು ನಾಯ್ಡು, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ, ಆಮ್‌ ಆದ್ಮೀ ಪಾರ್ಟಿಯ(ಎಎಪಿ) ನಾಯಕ ಅರವಿಂದ ಕೇಜ್ರೀವಾಲ್ ಅವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿಯ ಸದಸ್ಯ ಹಾಗೂ ಪಶ್ಚಿಮ ಬಂಗಾಳ ವಿರೋಧ ಪಕ್ಷದ ನಾಯಕ ಸುಜನ್‌ ಚಕ್ರವರ್ತಿ, ‘ಮಮತಾ ಬ್ಯಾನರ್ಜಿ ಅವರ ಆರೋಪ ಆಧಾರರಹಿತವಾಗಿದೆ. ಒಂದು ಕಡೆ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ನಮ್ಮ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿದ್ದಾರೆ. ಜತೆಗೆ, ಅವರ ಮನೆಗಳನ್ನು ಸುಟ್ಟುಹಾಕುತ್ತಿದ್ದಾರೆ. ಇದೀಗ ನಾವು ಅವರನ್ನು ಬೆಂಬಲಿಸುವಂತೆ ಬಯಸುತ್ತಿದ್ದಾರೆ. ಇದು ಅಸಾಧ್ಯ’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ...

2019ರಲ್ಲಿ ಬಿಜೆಪಿ 300+ ಸ್ಥಾನಗಳನ್ನು ಗೆಲ್ಲಲಿದೆ: ಪಿಯೂಶ್‌ ಗೋಯಲ್‌

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !