ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌: ಗೋಪ್ಯತೆಯೇ ಮೂಲಮಂತ್ರ

Last Updated 22 ನವೆಂಬರ್ 2019, 2:40 IST
ಅಕ್ಷರ ಗಾತ್ರ

2018ರಲ್ಲಿ ಜಾರಿಗೆ ತರಲಾದ ಚುನಾವಣಾ ಬಾಂಡ್ ಯೋಜನೆ ಮೂಲಕ ಈವರೆಗೆ ₹ 6,000 ಕೋಟಿಗೂ ಅಧಿಕ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲಾಗಿದೆ. ಆದರೆ, ಯಾರು ದೇಣಿಗೆ ನೀಡಿದ್ದಾರೆ ಮತ್ತು ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಲಾಗಿದೆ ಎಂಬುದನ್ನು ಗೋಪ್ಯವಾಗಿ ಇರಿಸಲಾಗಿದೆ. ಯೋಜನೆಯ ಮೂಲ ನಿಯಮಗಳಲ್ಲೇ ಈ ಗೋಪ್ಯತೆಗೆ ಅವಕಾಶವಿದೆ. ‘ಇದು ಕಪ್ಪು ಹಣವನ್ನು ಸಕ್ರಮಗೊಳಿಸುವ ಮಾರ್ಗ’ ಎಂಬುದು ವಿರೋಧ ಪಕ್ಷಗಳ ಆರೋಪ.

₹ 1,000 -ಕನಿಷ್ಠ ಮೊತ್ತದ ಬಾಂಡ್‌. ಬಾಂಡ್‌ ಮೂಲಕ ನೀಡಬಹುದಾದ ದೇಣಿಗೆಗೆ ಗರಿಷ್ಠ ಮಿತಿ ಇಲ್ಲ

15 ದಿನ -ಚುನಾವಣಾ ಬಾಂಡ್ ಖರೀದಿಗೆ ಬ್ಯಾಂಕ್ನಿಗದಿಪಡಿಸಿರುವ ಅವಧಿ. ಈ ಅವಧಿಯಲ್ಲಿ ಬ್ಯಾಂಡ್ ಖರೀದಿಸಿ ಅದನ್ನು ದೇಣಿಗೆ ನೀಡಬೇಕು. ಈ ಅವಧಿಯಲ್ಲೇ ಅದನ್ನು ನಗದೀಕರಿಸಿಕೊಳ್ಳಬೇಕು.

* ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಮಾತ್ರ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡುತ್ತದೆ. ಎಸ್‌ಬಿಐನ ಆಯ್ದ ಶಾಖೆಗಳಲ್ಲಿ ಮಾತ್ರ ಈ ಬಾಂಡ್‌ ಲಭ್ಯವಿದೆ

*ಯಾವುದೇ ಭಾರತೀಯ ಪ್ರಜೆ ಈ ಬಾಂಡ್‌ ಅನ್ನು ಖರೀದಿಸಬಹುದು. ಒಮ್ಮೆ ಖರೀದಿಸಿದ ಬಾಂಡ್‌ಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಅದನ್ನು ರಾಜಕೀಯ ಪಕ್ಷಗಳಿಗೆ ನೀಡಬೇಕು

*ರಾಜಕೀಯ ಪಕ್ಷಗಳು ಮಾತ್ರ ಈ ಬಾಂಡ್‌ಗಳನ್ನು ನಗದೀಕರಿಸಿಕೊಳ್ಳಬಹುದು. ಪಕ್ಷದ ಬ್ಯಾಂಕ್‌ ಖಾತೆಗೆ ಬಾಂಡ್‌ನ ಮೊತ್ತ ಜಮೆಯಾಗುತ್ತದೆ

ಆಧಾರ್‌, ಪ್ಯಾನ್‌ ಬೇಕಿಲ್ಲ

*ಬಾಂಡ್‌ ಖರೀದಿಸುವವರು ಆಧಾರ್, ಪ್ಯಾನ್‌ ನೀಡಬಹುದು. ಆದರೆ, ಆಧಾರ್ ಮತ್ತು ಪ್ಯಾನ್‌ ಇರದಿದ್ದರೂ ಬಾಂಡ್ ಖರೀದಿಸಬಹುದು. ಮನೆಯ ವಿದ್ಯುತ್ ಬಿಲ್‌ ಸಲ್ಲಿಸಿಯೂ ಬಾಂಡ್ ಖರೀದಿಸಬಹುದು

*ಚೆಕ್‌, ಡಿಡಿ, ಆರ್‌ಟಿಜಿಎಸ್‌ ಮೂಲಕ ಹಣ ಪಾವತಿ ಮಾಡಬಹುದು. ನಗದು ಪಾವತಿಸಿಯೂ ಬಾಂಡ್ ಖರೀದಿಸಬಹುದು. ಇದಕ್ಕಾಗಿ ಪ್ಯಾನ್‌ ಸಲ್ಲಿಸಬೇಕಿಲ್ಲ

*ಯಾವುದೇ ವ್ಯಕ್ತಿ/ಟ್ರಸ್ಟ್‌ ಎಷ್ಟು ಬಾರಿಯಾದರೂ ಬಾಂಡ್ ಖರೀದಿಸಬಹುದು. ಒಬ್ಬ ವ್ಯಕ್ತಿ ಸಾವಿರಾರು ಬಾರಿಯಾದರೂ ಬಾಂಡ್ ಖರೀದಿಸಬಹುದು. ಪ್ರತಿ ಬಾರಿ ಆತ ವಿಳಾಸ ದಾಖಲೆ ನೀಡಬೇಕು ಅಷ್ಟೆ. ಆತ ಎಷ್ಟು ಬಾರಿ ಬಾಂಡ್ ಖರೀದಿಸಿದ್ದಾನೆ ಎಂಬುದನ್ನು ದಾಖಲಿಸುವುದಿಲ್ಲ

*ಎಸ್‌ಬಿಐ ಮಾರಾಟ ಮಾಡುವ ಈ ಬಾಂಡ್‌ಗಳಲ್ಲಿ, ಬಾಂಡ್‌ನ ಮೊತ್ತದ ವಿವರ ಮಾತ್ರವಿರುತ್ತದೆ. ಬಾಂಡ್‌ ಖರೀದಿಸಿದವರು ಯಾರು, ಯಾವ ಪಕ್ಷಕ್ಕೆ ನೀಡುವ ಉದ್ದೇಶದಿಂದ ಖರೀದಿಸಲಾಗಿದೆ ಎಂಬ ವಿವರ ಈ ಬಾಂಡ್‌ನಲ್ಲಿ ಇರುವುದಿಲ್ಲ

*ಬಾಂಡ್‌ ಖರೀದಿಗೆ ಯಾವ ಸ್ವರೂಪದಲ್ಲಿ ಹಣ ಜಮೆ ಮಾಡಲಾಗಿದೆ ಎಂಬ ವಿವರವೂ ಗೋಪ್ಯವಾಗಿ ಇರುತ್ತದೆ

*ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ ಮೂಲಕ ದೇಣಿಗೆ ಪಡೆದರೆ, ದೇಣಿಗೆ ನೀಡಿದವರ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡುವ ಅಗತ್ಯವಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT