ಮೋದಿ ಮುಸ್ಲಿಮರ ಟೋಪಿ ಧರಿಸುವುದಿಲ್ಲ ಯಾಕೆ?: ತರೂರ್ ಪ್ರಶ್ನೆ

7

ಮೋದಿ ಮುಸ್ಲಿಮರ ಟೋಪಿ ಧರಿಸುವುದಿಲ್ಲ ಯಾಕೆ?: ತರೂರ್ ಪ್ರಶ್ನೆ

Published:
Updated:

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಎಲ್ಲ ರೀತಿಯ ಉಡುಗೆ ತೊಡುತ್ತಾರೆ ಆದರೆ ಮುಸ್ಲಿಮರ ಟೋಪಿ ಯಾಕೆ ಧರಿಸುವುದಿಲ್ಲ ಎಂದು ಕಾಂಗ್ರೆಸ್ ನೇತಾರ ಶಶಿ ತರೂರ್ ಪ್ರಶ್ನಿಸಿದ್ದಾರೆ.

ಅದೇ ವೇಳೆ  ಮೋದಿಯವರು ಹಸಿರು ಬಟ್ಟೆ ತೊಡುವುದಕ್ಕೆ ನಿರಾಕರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ ತರೂರ್. 
ತಿರುವನಂತಪುರಂನಲ್ಲಿ ನಡೆದ ಸೆಮಿನಾರ್ ನಲ್ಲಿ  'Standing up to hatred; Violence and intolerance in contemporary India'  ಎಂಬ ವಿಷಯದ ಬಗ್ಗೆ ಮಾತನಾಡಿದ ನಂತರ ತರೂರ್ ಈ ರೀತಿ ಪ್ರಶ್ನಿಸಿದ್ದಾರೆ.

ಶಶಿ ತರೂರ್ ಹೇಳಿದ್ದೇನು?
ದೇಶದ ಯಾವುದೇ ಭಾಗಕ್ಕೆ ಭೇಟಿ ನೀಡಿದರೂ ಮೋದಿಯವರು ಅಲ್ಲಿನ ಟೋಪಿ ಧರಿಸುತ್ತಾರೆ, ಆದರೆ ಅವರು ಮುಸ್ಲಿಮರು ಧರಿಸುವ ಟೋಪಿ ಧರಿಸಲು ನಿರಾಕರಿಸುತ್ತಿರುವುದೇಕೆ? ಗರಿಗಳಿರುವ ವಿಚಿತ್ರವಾಗಿರುವ ನಾಗಾ ಟೋಪಿಯನ್ನು ಧರಿಸಿ, ವಿಚಿತ್ರ ಉಡುಗೆಯನ್ನು ಪ್ರಧಾನಿಯವರು ಧರಿಸಿದ್ದು ನೀವು ನೋಡಿರಬಹುದು. ವಿವಿಧ ರೀತಿಯ ಉಡುಗೆಗಳನ್ನು ತೊಟ್ಟ ಇಂದಿರಾಗಾಂಧಿಯವರ ಫೋಟೊಗಳನ್ನೂ ನೀವು ನೋಡಿರಬಹುದು ಎಂದಿದ್ದಾರೆ.

 ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ತರೂರ್, ಕಳೆದ  ನಾಲ್ಕು ವರ್ಷಗಳಲ್ಲಿ ಕೋಮು ಗಲಭೆ ಮತ್ತು ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರ ಹೆಚ್ಚಾಗಿದೆ. ಗೃಹ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ  2,920 ಕೋಮು ಗಲಭೆ ಪ್ರಕರಣಗಳ ನಡೆದಿದ್ದು ಇದರಲ್ಲಿ  389 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಹಲವಾರು ಮಂದಿಗೆ ಗಾಯಗಳಾಗಿವೆ. ಇಂಥಾ ಪ್ರಕರಣಗಳು ಹೆಚ್ಚುತ್ತಿದ್ದರೂ ಮೋದಿಯವರು ಮುಂದೆ ಬಂದು ಹಿಂಸಾಚಾರವನ್ನು ಖಂಡಿಸಿಲ್ಲ ಎಂದಿದ್ದಾರೆ.

ಕಿರಣ್ ರಿಜಿಜು ಖಂಡನೆ
ನಾಗಾಲ್ಯಾಂಡ್ ‍ಗೆ ಹೋದಾಗ ಪ್ರಧಾನಿ ವಿಚಿತ್ರ ರೀತಿಯ ಟೋಪಿ ಧರಿಸುತ್ತಾರೆ ಎಂದು ಶಶಿ ತರೂರ್ ಹೇಳಿದ್ದಾರೆ. ಒಂದು ರಾಜ್ಯದ ಸಂಸ್ಕೃತಿಯನ್ನು ಈ ರೀತಿ ಅವಮಾನಿಸಿ ಹಾಸ್ಯ ಮಾಡಿದ ತರೂರ್ ಕ್ಷಮೆ ಕೇಳಬೇಕೆಂದು ಕೇಂದ್ರ ಸಚಿವ ಕಿರಣ್ ರಿಜಿಜು ಒತ್ತಾಯಿಸಿದ್ದಾರೆ. 

ಶಶಿ ತರೂರ್ ಅವರು ಈಶಾನ್ಯ ರಾಜ್ಯದವರ ಸಂಸ್ಕೃತಿಯನ್ನು ಅವಮಾನಿಸುವ ಮೂಲಕ ಭಾರತೀಯರ ಮೇಲೆ ಕಾಂಗ್ರೆಸ್ ಪಕ್ಷದವರಿಗಿರುವ ಅಸಹನೆಯನ್ನು ತೋರಿಸಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರಾಂಗ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಟ್ವೀಟ್ ಮಾಡಿದ್ದಾರೆ.
 

ಈ ಟ್ವೀಟ್‍ಗೆ ಉತ್ತರಿಸಿದ ತರೂರ್,  ಪ್ರೀತಿಯ ರಾಜ್ಯವರ್ಧನ್, ನಿಮಗೆ ಇದೆಲ್ಲ ಚೆನ್ನಾಗಿ ಗೊತ್ತಿದೆ. ಪ್ರತಿನಿಧಿಗಳು ರಾಜ್ಯಕ್ಕೆ ಭೇಟಿ ನೀಡುವಾಗ ಧರಿಸುವ ಸಾಂಪ್ರದಾಯಿಕ ಟೋಪಿಗಳ ಬಗ್ಗೆ ನಾನು ಹೇಳಿದ್ದೇನೆಯೇ ಹೊರತು, ದಿನ ನಿತ್ಯದ ದಿರಿಸಿನ ಬಗ್ಗೆ ಅಲ್ಲ. ಪ್ರಧಾನಿ ಎಲ್ಲ ರೀತಿಯ ಟೋಪಿ ಧರಿಸುವಾಗ ಈ ಒಂದು ಟೋಪಿಯನ್ನು ಧರಿಸುತ್ತಿಲ್ಲ ಯಾರೆ ಎಂಬುದು ನನ್ನ ಪ್ರಶ್ನೆ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !