ಬುಧವಾರ, ಜೂಲೈ 8, 2020
28 °C

ಕೇರಳ: 2015ರಿಂದ 416 ಕಾಡಾನೆಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳದಲ್ಲಿ 2015ರಿಂದ ಇಲ್ಲಿಯವರೆಗೂ 416 ಕಾಡಾನೆಗಳು ಸಾವನ್ನಪ್ಪಿದ್ದು, ಈ ಪೈಕಿ 24 ಕಾಡಾನೆಗಳು ಸ್ಫೋಟಕ ಅಥವಾ ವಿಷಾಹಾರ ಸೇವನೆ, ವಿದ್ಯುತ್‌ ಬೇಲಿ ಸ್ಪರ್ಷಿಸಿ ಹೀಗೆ ಅಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಿವೆ.

ಬೆಳೆ ಹಾನಿ ತಡೆಯಲು ಕಾಡುಪ್ರಾಣಿಗಳಿಗೆ ಹಣ್ಣುಗಳಲ್ಲಿ ವಿಷ, ಸ್ಫೋಟಕಗಳನ್ನು ತುಂಬಿಸಿ ಇಡುವುದು, ವಿದ್ಯುತ್‌ ಬೇಲಿ ಅಳವಡಿಕೆ ಮುಂತಾದ ಕ್ರೂರ ಕ್ರಮಗಳನ್ನು ಇತ್ತೀಚೆಗೆ ಪಾಲಕ್ಕಾಡ್‌ ಜಿಲ್ಲೆಯಲ್ಲಿ ನಡೆದ ಗರ್ಭಿಣಿ ಕಾಡಾನೆಯ ಹತ್ಯೆ ಪ್ರಕರಣ ಬೆಳಕಿಗೆ ತಂದಿದೆ.

ತಜ್ಞರ ಸಮಿತಿ ರಚನೆಯಾಗಿಲ್ಲ: ಎರ್ನಾಕುಳಂ ಜಿಲ್ಲೆಯಲ್ಲಿ ಆನೆಯೊಂದರ ಸಾವಿನ ಪ್ರಕರಣದಲ್ಲಿ, ಅಪಘಾತಕ್ಕೊಳಗಾದ ಅಥವಾ ಸ್ಫೋಟಕಗಳ ಸೇವನೆಯಿಂದ ಘಾಸಿಗೊಳಗಾದ ವನ್ಯಜೀವಿಗಳ ರಕ್ಷಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯನ್ನು ರಚಿಸಬೇಕು ಎಂದು 2014ರಲ್ಲೇ ಕೇರಳ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ ಇದನ್ನು ಇಲ್ಲಿಯವರೆಗೂ ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ.

5,706 : 2017ರ ಆನೆ ಗಣತಿಯ ಮಾಹಿತಿಯಂತೆ ಕೇರಳದಲ್ಲಿರುವ ಕಾಡಾನೆಗಳು

ಅಸ್ವಾಭಾವಿಕ ಕಾರಣದಿಂದ ಮೃತಪಟ್ಟ ಆನೆಗಳು

2019: 10 (ಒಂದು ಬೇಟೆಯಲ್ಲಿ, ಆರು ವಿದ್ಯುತ್‌ ಬೇಲಿ ಸ್ಪರ್ಷಿಸಿ ಸಾವು)

2020: 3 (ಈ ಪೈಕಿ ಎರಡು ಘಟನೆಗಳಲ್ಲಿ ಸ್ಫೋಟಕಗಳ ಬಳಕೆ)

246: 2019ರಲ್ಲಿ ಕೇರಳದಲ್ಲಿ ದಾಖಲಾದ ವನ್ಯಜೀವಿ ಹತ್ಯೆ ಪ್ರಕರಣಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು