'ನಾವು ಬಾಂಗ್ಲಾದೇಶಿ ಮುಸ್ಲಿಮರನ್ನು ಹೊರದಬ್ಬುತ್ತೇವೆ, ಬಂಗಾಳಿಗಳನ್ನಲ್ಲ': ಬಿಜೆಪಿ

7

'ನಾವು ಬಾಂಗ್ಲಾದೇಶಿ ಮುಸ್ಲಿಮರನ್ನು ಹೊರದಬ್ಬುತ್ತೇವೆ, ಬಂಗಾಳಿಗಳನ್ನಲ್ಲ': ಬಿಜೆಪಿ

Published:
Updated:

ಕೊಲ್ಕತ್ತಾ: ಕೊಲ್ಕತ್ತಾದಲ್ಲಿ ಆಗಸ್ಟ್ 11 ಶನಿವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರ್‍ಯಾಲಿ ನಡೆಯಲಿದ್ದು, ಈ ವೇಳೆ ಅಲ್ಲಿನ ರಸ್ತೆಗಳಲ್ಲಿ ಸ್ಥಾಪಿಸಿರುವ ಹೋರ್ಡಿಂಗ್ ಗಮನ ಸೆಳೆದಿದೆ.

ತಮ್ಮ ಮೇಲಿರುವ ಬಂಗಾಳಿ ವಿರೋಧಿ ಎಂಬ ಆರೋಪವನ್ನು ಹೋಗಲಾಡಿಸಲು, ಬಿಜೆಪಿ ತಮ್ಮ ಹೋರ್ಡಿಂಗ್ ಗಳಲ್ಲಿ ನಾವು ಬಾಂಗ್ಲಾದೇಶಿ ಮುಸ್ಲಿಮರನ್ನು ಹೊರದಬ್ಬುತ್ತೇವೆಯೇ ವಿನಾ ಬಂಗಾಳಿಗಳನ್ನಲ್ಲ ಎಂದು ಬರೆದಿದೆ.

ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ ಅಂತಿಮ ಕರಡು ಪಟ್ಟಿಯಲ್ಲಿ 40 ಲಕ್ಷ ಮಂದಿಯನ್ನು ಕೈ ಬಿಟ್ಟಿದ್ದಕ್ಕೆ ಬಿಜೆಪಿ ಬಂಗಾಳಿ ವಿರೋಧಿ ಎಂದು ತೃಣಮೂಲ ಕಾಂಗ್ರೆಸ್ ದೂರಿತ್ತು.

ಆದಾಗ್ಯೂ, ನಾವು ಬಂಗಾಳಿಗಳ ವಿರೋಧಿಗಳಲ್ಲ ಆದರೆ ಅಕ್ರಮ ನುಸುಳುಕೋರರನ್ನು ವಿರೋಧಿಸುತ್ತೇವೆ. ಹತ್ತಿರದ ದೇಶಗಳಿಂದ ಬಂದ ಹಿಂದೂ ನಿರಾಶ್ರಿತರಿಗೆ ನಾವು ಅಭಯ ನೀಡುತ್ತೇವೆ. ಆದರೆ ಅಕ್ರಮವಾಗಿ ಇಲ್ಲಿ ಬಂದು ನೆಲೆಸಿರುವ ಮುಸ್ಲಿಂ ನುಸುಳುಕೋರರಿಗೆ ಅಭಯ ನೀಡಲಾಗುವುದಿಲ್ಲ. ರಾಷ್ಟ್ರೀಯ ಪೌರ ನೋಂದಣಿ ಮೂಲಕ ಬಂಗಾಳಿಗಳನ್ನು ಹೊರದಬ್ಬಲಾಗುತ್ತದೆ ಎಂಬ ತಪ್ಪು ಸಂದೇಶ ಹರಡಿದೆ. ಇಲ್ಲಿಂದ ಬಾಂಗ್ಲಾದೇಶಿ ಮುಸ್ಲಿಮರನ್ನಷ್ಟೇ ನಾವು ಹೊರದಬ್ಬುತ್ತೇವೆ ಎಂದು ಬಿಜೆಪಿಯ ಹಿರಿಯ ನೇತಾರರೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 1

  Sad
 • 2

  Frustrated
 • 7

  Angry

Comments:

0 comments

Write the first review for this !