ಜ್ವಾಲಾಮುಖಿಯನ್ನೇ ಸಂಪರ್ಕಿಸಿ ಕೇಳುತ್ತೇನೆ ಎಂದ ಸುಷ್ಮಾ!

7

ಜ್ವಾಲಾಮುಖಿಯನ್ನೇ ಸಂಪರ್ಕಿಸಿ ಕೇಳುತ್ತೇನೆ ಎಂದ ಸುಷ್ಮಾ!

Published:
Updated:
Deccan Herald

ನವದೆಹಲಿ: ‘ಇಂಡೊನೇಷ್ಯಾದ ಬಾಲಿಗೆ ಪ್ರವಾಸಕ್ಕೆ ತೆರಳುವುದು ಸುರಕ್ಷಿತವೇ?’

‘ಜ್ವಾಲಾಮುಖಿಯನ್ನೇ ಸಂಪರ್ಕಿಸಿ ಕೇಳಿನೋಡುತ್ತೇನೆ’

–ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೀಡಿದ ಖಡಕ್ ಉತ್ತರ ಇದು. ಇದನ್ನು 11 ಸಾವಿರ ಮಂದಿ ಲೈಕ್ ಮಾಡಿದ್ದು, 2 ಸಾವಿರ ಬಾರಿ ರಿಟ್ವೀಟ್ ಆಗಿದೆ.

ಸುಷ್ಮಾ ಉತ್ತರಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂತಹ ಹುಡುಗಾಟದ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಟ್ವಿಟರ್ ಬಳಕೆದಾರರು ಟೀಕಿಸಿದ್ದಾರೆ. 

‘ಆಗಸ್ಟ್ 12ರಿಂದ 17ರವರೆಗೆ ಬಾಲಿ ಪ್ರವಾಸಕ್ಕೆ ಯೋಜಿಸಿದ್ದೇನೆ. ಭಾರತ ಸರ್ಕಾರದಿಂದ ಏನಾದರೂ ಸಲಹೆ ಇದೆಯೇ’ ಎಂದು ಪ್ರಶ್ನಿಸಿದ್ದ ವ್ಯಕ್ತಿ, ಸುಷ್ಮಾ ಅವರ ಸಲಹೆಯನ್ನೂ ಕೇಳಿದ್ದ. ಈ ಟ್ವೀಟ್‌ಗೆ ಇಂಡೊನೇಷ್ಯಾದ ಭಾರತೀಯ ರಾಯಭಾರ ಕಚೇರಿಯನ್ನು ಟ್ಯಾಗ್ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 1

  Sad
 • 4

  Frustrated
 • 2

  Angry

Comments:

0 comments

Write the first review for this !