ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆಯಲ್ಲಿ ಚುನಾವಣಾ ಬಾಂಡ್ ಬಗ್ಗೆ ಚರ್ಚೆ; ಕಲಾಪ ಬಹಿಷ್ಕರಿಸಿದ ಕಾಂಗ್ರೆಸ್

Last Updated 21 ನವೆಂಬರ್ 2019, 8:44 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಲ್ಲಿ ಗುರುವಾರ ಚುನಾವಣಾ ಬಾಂಡ್ ಯೋಜನೆ ಬಗ್ಗೆ ಚರ್ಚೆಯಾಗಿದೆ. ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಈ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಇದು ಪ್ರಮುಖ ವಿಷಯ. ನಾವುಚುನಾವಣಾ ಬಾಂಡ್ ಬಗ್ಗೆ ಸದನ ಗಮನ ಹರಿಸುವಂತೆ ಮನವಿ ಮಾಡುತ್ತಿದ್ದೇವೆ.ಚುನಾವಣಾ ಬಾಂಡ್ ಚುನಾವಣೆಗಳಿಗೆ ಮಾತ್ರ ಸೀಮಿತವಾಗಿದೆ ಎಂದಿದ್ದಾರೆ.

ಚುನಾವಣಾ ಬಾಂಡ್‌ಗಳು ಹಗರಣವನ್ನು ಅಧಿಕೃತ ಮಾಡುತ್ತವೆ
ಚುನಾವಣಾ ಬಾಂಡ್ ಯೋಜನೆ ಹಗರಣವನ್ನು ಅಧಿಕೃತ ಮಾಡುತ್ತದೆ. ಶೂನ್ಯವೇಳೆಯಲ್ಲಿ ಈ ಬಗ್ಗೆ ಚರ್ಚೆ ಆರಂಭಿಸಿದ ಮನೀಶ್ ತಿವಾರಿ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಚುನಾವಣಾ ಆಯೋಗ ಇದನ್ನು ಕಾಯ್ದಿರಿಸುವಂತೆ ಹೇಳಿದರೂ ಸರ್ಕಾರ ಅದನ್ನು ಜಾರಿ ಮಾಡಲು ಮುಂದಾಗಿದೆ. ಬಾಂಡ್ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್ ಸದಸ್ಯರು ಕಲಾಪದಿಂದ ಹೊರ ನಡೆದು ಕಲಾಪ ಬಹಿಷ್ಕರಿಸಿದ್ದಾರೆ.

ಇದಕ್ಕೆ ದನಿಗೂಡಿಸಿದ ಸಂಸದ ಶಶಿ ತರೂರ್, ಚುನಾವಣಾ ಬಾಂಡ್ ಜಾರಿಗೆ ಬಂದರೆ ಶ್ರೀಮಂತ ಕುಳಗಳು ರಾಜಕೀಯ ಪಕ್ಷಗಳ ಮೇಲೆ ಆಡಳಿತರೂಢ ಪಕ್ಷಗಳ ಮೇಲೆ ಪ್ರಭಾವ ಬೀರಲು ಸುಲಭವಾಗುತ್ತದೆ ಎಂಬ ಕಾರಣದಿಂದ ನಾವು ಅದನ್ನು ವಿರೋಧಿಸಿದ್ದೆವು ಎಂದು ಹೇಳಿದ್ದಾರೆ.

ಸಂಸದರು ಸದನದ ಘನತೆ ಕಾಪಾಡಿ ಎಂದು ಮನವಿ ಮಾಡಿದ ಸ್ಪೀಕರ್
ಸದನದ ಬಾವಿಗಿಳಿದು ಸಂಸದರು ಪ್ರತಿಭಟಿಸಿದಾಗ ಸಂಸತ್ತಿನಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳ ಕೈಪಿಡಿಯ ಪ್ರತಿಯನ್ನ ತೋರಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸತ್ತಿನ ಘನತೆ ಕಾಪಾಡಿ ಎಂದು ಸಂಸದರಿಗೆ ಮನವಿ ಮಾಡಿದ್ದಾರೆ. ನೀವೆಲ್ಲರೂ ಹಿರಿಯ ಸಂಸದರು, ನಾನು ಇಲ್ಲಿಗೆ ಹೊಸಬ. ಸದನದ ಬಾವಿಗಿಳಿದು ಪ್ರತಿಭಟಿಸಿ ಕಲಾಪಕ್ಕೆ ಅಡ್ಡಿ ಪಡಿಸಬೇಡಿ ಎಂದು ಬಿರ್ಲಾ ಹೇಳಿದ್ದಾರೆ.

ದೇಶದಲ್ಲಿ ತಕ್ಷಣ ಗಮನ ಹರಿಸಬೇಕಾದ ಕೆಲವೊಂದು ಸಮಸ್ಯೆಗಳಿರುತ್ತವೆ. ನಿಮಗೆ ಅಗೌರವ ತರಲು ನಾವು ಇದನ್ನು ಮಾಡುತ್ತಿಲ್ಲ. ಚುನಾವಣಾ ಬಾಂಡ್ ಎಂಬುದು ಹಗರಣ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಮಧ್ಯಾಹ್ನದ ವರೆಗೆ ರಾಜ್ಯಸಭಾ ಕಲಾಪ ಮುಂದೂಡಿಕೆ
ಖಾಸಗೀಕರಣ ಮತ್ತು ಚುನಾವಣಾ ಬಾಂಡ್ ಬಗ್ಗೆ ಸದನದಲ್ಲಿ ಚರ್ಚೆಯಾಗಿದ್ದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಗದ್ದಲವುಂಟು ಮಾಡಿವೆ. ಹಾಗಾಗಿ ಮಧ್ಯಾಹ್ನ 2 ಗಂಟೆವರಗೆ ರಾಜ್ಯಸಭಾ ಕಲಾಪವನ್ನು ಮುಂದೂಡಲಾಗಿದೆ.

ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ತೋರಿಸಿ
ಭಾರತದ ಭೂಪಟವನ್ನು ಪರಿಷ್ಕರಿಸಬೇಕು ಎಂದು ಟಿಡಿಪಿ ಸಂಸದ ಜಯದೇವ್ ಗಲ್ಲಾ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈಗಿನ ಭೂಪಟದಲ್ಲಿ ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಎಂದು ತೋರಿಸುತ್ತಿಲ್ಲ. ಇದು ಆಂಧ್ರ ಪ್ರದೇಶದ ಜನರಿಗಷ್ಟೇ ಅಲ್ಲ ಪ್ರಧಾನಿಯವರಿಗೂ ಮಾಡಿದ ಅವಮಾನ ಎಂದಿದ್ದಾರೆ. ಆಂಧ್ರ ಪ್ರದೇಶದಲ್ಲಿ ಅಮರಾವತಿಯನ್ನು ಹೊಸ ರಾಜಧಾನಿಯಾಗಿ ನಿರ್ಮಾಣ ಮಾಡುವುದಕ್ಕಾಗಿ ವಿಳಂಬ ಮಾಡಿರುವ ಬಗ್ಗೆ ಟಿಡಿಪಿ ರಾಜ್ಯಸಭೆಯಲ್ಲಿ ಶೂನ್ಯವೇಳೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT