ಮಂಗಳವಾರ, ಆಗಸ್ಟ್ 20, 2019
25 °C

ವಿಷ ಕುಡಿದಿದ್ದ ಮಹಿಳೆಗೆ ಚಿಕಿತ್ಸೆ ನೀಡುವ ವೇಳೆ ಬಾಯಲ್ಲಿ ಸ್ಫೋಟ!

Published:
Updated:

ಲಖನೌ: ಉತ್ತರ ಪ್ರದೇಶದ ಅಲಿಗಢ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ವಿಚಿತ್ರ ಘಟನೆಯೊಂದು ನಡೆದಿದೆ. ವಿಷ ಸೇವಿಸಿದ್ದ ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದಾಗ ಆಕೆಯ ಬಾಯಲ್ಲಿ ಸ್ಫೋಟ ಸಂಭವಿಸಿದೆ. 

ವಿಷ ಸೇವನೆಯಿಂದ ಅಸ್ವಸ್ತಗೊಂಡಿದ್ದ ಮಹಿಳೆಯೊಬ್ಬರನ್ನು ಗುರುವಾರ ಅಲಿಗಢದ ಜೆಎನ್‌ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ವೈದ್ಯರು ಆಕೆಯ ಬಾಯಿಗೆ ವಿಷ ಹೀರುವ ಫೈಪ್‌ಗಳನ್ನು ಹಾಕಿದ್ದರು. ಆಗ ಬಾಯಲ್ಲಿ ದೀಢೀರ್‌ ಸ್ಫೋಟ ಸಂಭವಿಸಿದೆ. ಹೀಗಾಗಿ ಮಹಿಳೆ ಆಸ್ಪತ್ರೆಯಲ್ಲೇ ಸಾವಿಗೀಡಾಗಿದ್ದಾರೆ. ಈ ಘಟನೆ ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಬಹುಶಃ ಮಹಿಳೆ ಸೇವಿಸಿದ್ದ ವಿಷಯದಲ್ಲಿ ಸಲ್ಫ್ಯೂರಿಕ್‌ ಆಮ್ಲವಿದ್ದಿರಬಹುದು. ಹೊಟ್ಟೆಯಲ್ಲಿನ ವಿಷ ಹೀರಲೆಂದು ಪೈಪ್‌ಗಳನ್ನು ಹಾಕಿದಾಗ ಸಲ್ಫ್ಯೂರಿಕ್‌ ಆಮ್ಲವು ಆಮ್ಲಜನಕದೊಂದಿಗೆ ಸಂಪರ್ಕಕ್ಕೆ ಬಂದು ಸ್ಫೋಟ ಸಂಭವಿಸಿದೆ ಎಂದು ನಾವು ಅಂದಾಜಿಸಿದ್ದೇವೆ ಎಂದಿದ್ದಾರೆ ಆಸ್ಪತ್ರೆಯ ವೈದ್ಯರು. 

ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಿದ ನಂತರವೇ ನಿಜವಾದ ಕಾರಣ ತಿಳಿಯಲಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. 

Post Comments (+)