'ಮಹಾ ಮಳೆ'ಗೆ ಬೈಕ್‍ನಿಂದ ಬಿದ್ದ ಮಹಿಳೆ ಬಸ್ಸಿನ ಚಕ್ರದಡಿಗೆ ಸಿಲುಕಿ ಸಾವು

7

'ಮಹಾ ಮಳೆ'ಗೆ ಬೈಕ್‍ನಿಂದ ಬಿದ್ದ ಮಹಿಳೆ ಬಸ್ಸಿನ ಚಕ್ರದಡಿಗೆ ಸಿಲುಕಿ ಸಾವು

Published:
Updated:

ಮುಂಬೈ: ಜಲಾವೃತವಾದ ರಸ್ತೆಯಲ್ಲಿ ತನ್ನ ಗಂಡನ ಜತೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ರಸ್ತೆಗುಂಡಿಯಿಂದಾಗಿ ಬೈಕ್  ಆಯ ತಪ್ಪಿದೆ. ಈ ವೇಳೆ ಹಿಂಬದಿ ಸವಾರಳಾಗಿದ್ದ ಮಹಿಳೆ ಸೀಟಿನಿಂದ ಜಾರಿ ಬಿದ್ದಾಗ ಆಕೆಯ ಮೈಮೇಲೆ ಬಸ್ ಹರಿದಿದೆ. ಮುಂಬೈ ಮಳೆಯಲ್ಲಿ ಸಂಭವಿಸಿದ ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಭಾನುವಾರ ಸಂಜೆ ಥಾಣೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಥಾಣೆಯ ಕಲ್ಯಾಣ ನಿವಾಸಿಯಾಗಿರುವ ಮನೀಶಾ ಭೋರ್ ಎಂಬವರು ತಮ್ಮ ಪತಿಯೊಂದಿಗೆ ಮನೆಯತ್ತ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್‍ನಲ್ಲಿ ಹಿಂಬದಿ ಸವಾರಳಾಗಿದ್ದ ಮನೀಶಾ ಕೊಡೆ ಹಿಡಿದುಕೊಂಡು ಕುಳಿತಿದ್ದರು.
ಕಲ್ಯಾಣ್‍ನ ಶಿವಾಜಿ ಚೌಕ್ ತಲುಪಿದಾಗ ರಸ್ತೆ ಗುಂಡಿಯಿಂದಾಗಿ ಬೈಕ್ ವಾಲಿಕೊಂಡಿದ್ದು, ಮನೀಶಾ ಬೈಕ್  ಸೀಟಿನಿಂದ ಜಾರಿ ಬಿದ್ದಿದ್ದಾರೆ. ಆ ಹೊತ್ತಿಗೆ ವೇಗವಾಗಿ ಬರುತ್ತಿದ್ದ ಬಸ್ ಮನೀಶಾ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಕಳೆದೆರಡು ದಿನಗಳಿಂದ ಮುಂಬೈನಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲವೂ ಜಲಾವೃತವಾಗಿ ಸಂಚಾರಕ್ಕೆ ಅಡಚಣೆಯುಂಟಾಗಿದೆ.
 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 9

  Sad
 • 1

  Frustrated
 • 0

  Angry

Comments:

0 comments

Write the first review for this !