ಕೆಲಸದಿಂದ ವಜಾ: ಕೋರ್ಟ್‌ ಮೆಟ್ಟಿಲೇರಿ ನ್ಯಾಯ ಪಡೆದ ಎಚ್‌ಐವಿ ಸೋಂಕಿತ ಮಹಿಳೆ

7

ಕೆಲಸದಿಂದ ವಜಾ: ಕೋರ್ಟ್‌ ಮೆಟ್ಟಿಲೇರಿ ನ್ಯಾಯ ಪಡೆದ ಎಚ್‌ಐವಿ ಸೋಂಕಿತ ಮಹಿಳೆ

Published:
Updated:

ಪುಣೆ: ಎಚ್‌ಐವಿ ಸೋಂಕು ಇದೆ ಎಂಬ ಕಾರಣಕ್ಕೆ ಒತ್ತಾಯಪೂರ್ವಕವಾಗಿ ಕೆಲಸದಿಂದ ವಜಾಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆ ಮೂರು ವರ್ಷಗಳ ನಂತರ ನ್ಯಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ಕಾರ್ಮಿಕ ನ್ಯಾಯಾಲಯದ ಅಧಿಕಾರಿ ಕಲ್ಪನಾ ಫಠಂಣ್‌ಗರೆ, ಮಹಿಳೆಯನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವ ಜೊತೆಗೆ ಮೂರು ವರ್ಷಗಳ ವೇತನ ಮತ್ತು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವಂತೆ ಮಹಿಳೆ ಕೆಲಸ ಮಾಡುತ್ತಿದ್ದ ಔಷಧಿ ತಯಾರಿಕಾ ಕಂಪನಿಗೆ ಸೂಚಿಸಿದ್ದಾರೆ.

ವೈದ್ಯಕೀಯ ಸವಲತ್ತು ಪಡೆಯಲು ಸಲ್ಲಿಸಿದ್ದ ದಾಖಲೆಗಳ ಪ್ರಕಾರ ಏಡ್ಸ್‌ ಇರುವುದು ತಿಳಿದು, 2015ರಲ್ಲಿ ಬಲವಂತದಿಂದ ರಾಜೀನಾಮೆ ಪಡೆಯಲಾಗಿತ್ತು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದರು.

‘ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರುವುದಾಗಿ ಹೇಳಿದ್ದರೂ ಎಚ್‌ಐವಿ ಸೋಂಕಿತೆ ಎಂದು ಗೊತ್ತಾದ ಬಳಿಕ ಮಾನವ ಸಂಪನ್ಮೂಲ ಅಧಿಕಾರಿಗಳು ಬಲವಂತದಿಂದ ಕೆಲಸಕ್ಕೆ ರಾಜೀನಾಮೆ ಪಡೆದಿದ್ದಾರೆ. ಪತಿ ಎಚ್‌ಐವಿ ಸೋಂಕಿನಿಂದ ಮೃತಪಟ್ಟಿದ್ದು, ನನಗೀಗ ಕೆಲಸದ ಅವಶ್ಯಕತೆ ಇದೆ’ ಎಂದು ಮಹಿಳೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಮಹಿಳೆ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದರು. ಗ್ರಾಜ್ಯುಯಿಟಿ, ಬೋನಸ್, ರಜೆ ಮತ್ತಿತರ ಸವಲತ್ತುಗಳನ್ನು ನೀಡಲಾಗಿದೆ ಎಂದು ಕಂಪನಿ ತಿಳಿಸಿತ್ತು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !