4

ರೊಟ್ಟಿ ಸೀದಿಸಿದ ಮಹಿಳೆಗೆ ತಲಾಖ್‌ !

Published:
Updated:

ಬಂದಾ: ‘ರೊಟ್ಟಿ ಸೀದು ಹೋಗಿದ್ದಕ್ಕೆ ಪತಿ ತ್ರಿವಳಿ ತಲಾಖ್‌ ನೀಡಿದ್ದು, ಮನೆ ಬಿಟ್ಟು ಹೋಗುವಂತೆ ಹೇಳಿದ್ದಾನೆ’ ಎಂದು ದೂರಿ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. 

ಮಹೋಬಾ ಜಿಲ್ಲೆಯ ಪಹರೆಥಾ ಗ್ರಾಮದಲ್ಲಿ 24 ವರ್ಷದ ಮಹಿಳೆಯೊಬ್ಬರು ಈ ಬಗ್ಗೆ ದೂರು ನೀಡಿದ್ದು, ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಎಸ್‌ಪಿ ಬನ್ಸ್‌ರಾಜ್‌ ಯಾದವ್ ತಿಳಿಸಿದ್ದಾರೆ. 

‘ತ್ರಿವಳಿ ತಲಾಖ್‌ ನೀಡುವ ಮೂರು ದಿನಗಳ ಮುನ್ನ, ಸಿಗರೇಟ್‌ನಿಂದ ಸುಟ್ಟು ಮಹಿಳೆಯನ್ನು ಆಕೆಯ ಪತಿ ಗಾಯಗೊಳಿಸಿದ್ದಾನೆ’ ಎಂದೂ ಪೊಲೀಸರು ತಿಳಿಸಿದ್ದಾರೆ.

ತ್ರಿವಳಿ ತಲಾಖ್‌ ನೀಡುವುದು ಅಸಂವಿಧಾನಿಕ ಎಂದು ಕಳೆದ ಆಗಸ್ಟ್‌ 22ರಂದು ಸುಪ್ರೀಂಕೋರ್ಟ್‌ ಹೇಳಿದೆ. 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !