ರೈಲಿನಲ್ಲೇ ಹೆರಿಗೆ, ಅವಳಿ ಮಕ್ಕಳ ಜನನ

7
MH-TWINS ON TRAIN

ರೈಲಿನಲ್ಲೇ ಹೆರಿಗೆ, ಅವಳಿ ಮಕ್ಕಳ ಜನನ

Published:
Updated:
ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಮುಂಬೈ: ಮುಂಬೈ– ವಿಶಾಖಪಟ್ಟಣ ರೈಲಿನಲ್ಲಿ ಕಲ್ಯಾಣ್‌ ಜಂಕ್ಷನ್‌ನಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಸೋಮವಾರ ಜನ್ಮ ನೀಡಿದ್ದಾರೆ.

ಮುಂಬೈನ ಘಾಟ್ಕೊಪರ್‌ ನಿವಾಸಿ ಶೇಖ್ ತಬಸ್ಸಂ ಅವರು ಹೆಣ್ಣು ಮತ್ತು ಗಂಡು ಮಗುವಿಗೆ ಜನ್ಮನೀಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ತಮ್ಮ ಕುಟುಂಬದ ಸದಸ್ಯರ ಜತೆ ರೈಲಿನಲ್ಲಿ ತಬಸ್ಸಂ ಅವರು ಪ್ರಯಾಣ ಮಾಡುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿತ್ತು. ವೈದ್ಯಕೀಯ ತುರ್ತು ಮಾಹಿತಿ ಪಡೆದ ಅಧಿಕಾರಿಗಳು ರೈಲನ್ನು ಕಲ್ಯಾಣ್‌ ಎಂಬಲ್ಲಿ ನಿಲ್ಲಿಸಿದರು. ರೈಲ್ವೆಯ ವೈದ್ಯಕೀಯ ತಂಡವನ್ನು ಮಹಿಳೆ ನೆರವಿಗೆ ಕಳುಹಿಸಲಾಯಿತು.

ಹೆರಿಗೆ ನಂತರ ತಾಯಿ ಮತ್ತು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಮೂವರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 25

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !