ಪತಿಗೇ ತ್ರಿವಳಿ ತಲಾಖ್‌ ನೀಡಿದ ಪತ್ನಿ!

7

ಪತಿಗೇ ತ್ರಿವಳಿ ತಲಾಖ್‌ ನೀಡಿದ ಪತ್ನಿ!

Published:
Updated:

ಯಮುನಾ ನಗರ, (ಹರಿಯಾಣ): ತ್ರಿವಳಿ ತಲಾಖ್‌ ಕುರಿತು ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಮಹಿಳೆಯೊಬ್ಬರು ಪತಿಗೇ ತ್ರಿವಳಿ ತಲಾಖ್‌ ನೀಡಿದ ಪ್ರಕರಣ ಇಲ್ಲಿನ ಉನ್‌ಹೆದಿ ಗ್ರಾಮದಲ್ಲಿ ವರದಿಯಾಗಿದೆ.

ಮೂವರು ಮಕ್ಕಳ ತಾಯಿಯಾದ ಶಾಜಿಯಾ ‘ತಲಾಖ್‌ ತಲಾಖ್‌ ತಲಾಖ್‌’ ಎಂದು ಕಾಗದವೊಂದರಲ್ಲಿ ಮೂರು ಬಾರಿ ಬರೆದು, ಪತಿ ಅಬ್ಬಾಸ್‌ ಅವರಿಗೆ ವಿಚ್ಛೇದನ ನೀಡಿದ್ದಾರೆ. ಬಳಿಕ, ತಮ್ಮ ಪ್ರೇಮಿಯಾಗಿದ್ದ ಅವಿವಾಹಿತ ಸೋದರಳಿಯನ ಜತೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮದುವೆಯಾದ ದಿನದಿಂದಲೂ ನನಗೆ ಚಿತ್ರಹಿಂಸೆ ನೀಡುತ್ತಿದ್ದೆ. ಕುಡಿದು ಬಂದು ಹೊಡೆಯುತ್ತಿದ್ದೆ. ಇದರಿಂದ ನಾನು ರೋಸಿಹೋಗಿದ್ದು, ಸ್ವಂತ ಇಚ್ಛೆಯಿಂದ ವಿಚ್ಛೇದನ ನೀಡುತ್ತಿದ್ದೇನೆ. ಇದಕ್ಕೆ ಯಾರೂ ಕಾರಣರಲ್ಲ’ ಎಂದು ಶಾಜಿಯಾ ಅವರು ಪತಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !