ಜಗಳ ತಡೆಯಲು ಯತ್ನಿಸಿದ ಮಹಿಳೆಗೆ ಥಳಿಸಿ ವಿವಸ್ತ್ರಗೊಳಿಸಿದರು!

7

ಜಗಳ ತಡೆಯಲು ಯತ್ನಿಸಿದ ಮಹಿಳೆಗೆ ಥಳಿಸಿ ವಿವಸ್ತ್ರಗೊಳಿಸಿದರು!

Published:
Updated:

ನವದೆಹಲಿ: ಮನೆಯೊಡತಿಯ ಮನೆಯಲ್ಲಿ ಜಗಳ ನಡೆಯುತ್ತಿರುವಾಗ ಅದನ್ನು ತಡೆಯಲು ಯತ್ನಿಸಿದ ಮಹಿಳೆಗೆ ಥಳಿಸಿ ವಿವಸ್ತ್ರಗೊಳಿಸಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ನೈಋತ್ಯ ದೆಹಲಿಯ ಪಲಾಮ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಹಿಳೆಯ ದೂರು ಪ್ರಕಾರ ತಮ್ಮ ಮನೆಯೊಡತಿಯ ಮನೆಯಲ್ಲಿ ಆಕೆಯ ಸೊಸೆ ಮತ್ತು ಮಗ ಆ ಮಹಿಳೆ ಮೇಲೆ ಹಲ್ಲೆ ನಡೆಸುತ್ತಿದ್ದರು. ಆ ಜಗಳವನ್ನು ತಡೆಯಲು ಯತ್ನಿಸಿದಾಗ ಮನೆಯೊಡತಿಯ ಸೊಸೆ ಮತ್ತು ಮಗ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಿದ್ದಾಗ ಅವರು ನನ್ನ ಬಟ್ಟೆ ಹರಿದಿದ್ದಾರೆ ಎಂದಿದ್ದಾರೆ.

ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಮಹಿಳೆ ಅಸಹಾಯಕಳಾಗಿ ಓಡುತ್ತಿದ್ದರೆ ಅಲ್ಲಿ ನೆರೆದಿದ್ದ ಜನರು ಮೊಬೈಲ್‍ನಲ್ಲಿ ವಿಡಿಯೊ ಚಿತ್ರೀಕರಣ ಮಾಡುವುದರಲ್ಲಿ ತಲ್ಲೀನರಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 2

  Frustrated
 • 2

  Angry

Comments:

0 comments

Write the first review for this !