ಬುಧವಾರ, ಜನವರಿ 22, 2020
25 °C

ಮಶ್ಚಿಮ ಬಂಗಾಳದ ಮಾಲ್ದಾದಲ್ಲಿ ಮಹಿಳೆಯ ಸುಟ್ಟ ದೇಹ ಪತ್ತೆ; ಅತ್ಯಾಚಾರದ ಶಂಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮಾಲ್ದಾ: ಮಶ್ಚಿಮ ಬಂಗಾಳದ ಮಾಲ್ದಾದಲ್ಲಿ ಮಹಿಳೆಯೊಬ್ಬರ ಸುಟ್ಟು ಕರಕಲಾದ ದೇಹ ಪತ್ತೆಯಾಗಿದ್ದು, ಅವರ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

‘ಹತ್ಯೆಯಾಗಿರುವ ಮಹಿಳೆಯು ಸುಮಾರು 20ರಿಂದ 25 ವರ್ಷ ವಯಸ್ಸಿನವರಿರಬಹುದು ಎಂದು ಅಂದಾಜಿಸಲಾಗಿದೆ. ಶರೀರವು ಸುಟ್ಟು ಕರಕಲಾಗಿರುವುದರಿಂದ ಮಹಿಳೆಯ ಗುರುತು ಪತ್ತೆ ಮಾಡಲು ಕಷ್ಟವಾಗುತ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಮಾಲ್ದಾ ವೈದ್ಯಕೀಯ ಕಾಲೇಜಿಗೆ ಶವವನ್ನು ಕಳುಹಿಸಲಾಗಿದೆ’ ಎಂದು ಡಿಸಿಪಿ ಅಲೋಕ್‌ ರಜೋರಿಯ ತಿಳಿಸಿದ್ದಾರೆ.

‘ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಹತ್ಯೆ ನಡೆಸಲಾಗಿದೆ. ಅದಾದ ನಂತರ ಶರೀರಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು